ನಾವೆಲ್ಲರೂ ನಮ್ಮ ಕುಟುಂಬದಿಂದ ಮತ್ತು ಸ್ನೇಹಿತರಿಂದ ಆರೋಗ್ಯಕರ ಮತ್ತು ಆರೋಗ್ಯಕರವಲ್ಲದ ಆಹಾರದ ಬಗೆಗೆ ಸಾಕಷ್ಟು ಸಲಹೆಗಳನ್ನು ಈಗಾಗಲೇ ಸ್ವೀಕರಿಸಿದ್ದೇವೆ. ಟೆಲಿವಿಷನ್ ಜಾಹೀರಾತುಗಳಿಂದ ಹಿಡಿದು ನಿಯತಕಾಲಿಕೆಗಳವರೆಗೆ ಮತ್ತು ಈಗ ಇಂಟರ್ನೆಟ್ ಪ್ರಪಂಚದವರೆಗೆ ಪೌಷ್ಠಿಕಾಹಾರದ ಬಗೆಗಿನ ಮಾಹಿತಿಯ ಹಂತಗಳನ್ನು ಕಾಣಬಹುದು. ಪೌಷ್ಠಿಕಾಂಶದ ಸಂಶೋಧನೆಯು ಗೊಂದಲಮಯವಾಗಿರುತ್ತದೆ ಮತ್ತು ಅದು ಯಾವಾಗಲೂ ಬದಲಾಗುತ್ತಿರುತ್ತದೆ.
ಅವು ಎಷ್ಟು ನಿಜ?
ವೈಜ್ಞಾನಿಕ ಸಾಕ್ಷ್ಯಗಳ ಆಧಾರದ ಮೇಲೆ ಸ್ಪಷ್ಟೀಕರಣಗಳ ಅಗತ್ಯವಿರುವ ಕೆಲವು ಸಾಮಾನ್ಯ ಮಿಥ್ಯೆಗಳು ಇಲ್ಲಿವೆ.
ಎಲ್ಲಾ ಕ್ಯಾಲೊರಿಗಳು ಒಂದೇ ಆಗಿರುತ್ತವೆ
ಥರ್ಮೋಡೈನಾಮಿಕ್ಸ್ನ ಸಮೀಕರಣವನ್ನು ನಾವು ಪರಿಗಣಿಸಿದರೆ, ಒಂದು ಕ್ಯಾಲೋರಿ ಒಂದು ಕ್ಯಾಲೊರಿಗೆ ಸಮಾನವಾಗಿರುತ್ತದೆ, ಆದರೆ ಎಲ್ಲಾ ಆಹಾರ ಕ್ಯಾಲೊರಿಗಳು ಸಮಾನವಾಗಿವೆ ಎಂಬ ಕಲ್ಪನೆಯು ಒಂದುಮಿಥ್ಯೆ. ಆಹಾರದಿಂದ ಬರುವ ಕ್ಯಾಲೊರಿಗಳನ್ನು ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ ಅಥವಾ ಕೊಬ್ಬಿನಿಂದ ಪಡೆಯಲಾಗುತ್ತದೆ. ಈ ಮ್ಯಾಕ್ರೋನ್ಯೂಟ್ರಿಯಂಟ್ಗಳು ದೇಹದಲ್ಲಿ ವಿಭಿನ್ನ ಚಯಾಪಚಯ ಮತ್ತು ಉಷ್ಣ ಪರಿಣಾಮಗಗಳಿಗೆ ಕಾರಣವಾಗುತ್ತವೆ. (ಅಂದರೆ ಆಹಾರವನ್ನು ಒಡೆಯಲು ಖರ್ಚು ಮಾಡಿದ ಶಕ್ತಿ). ಆದ್ದರಿಂದ, ಪ್ರೋಟೀನ್ ಮೂಲದಿಂದ ಸೇವಿಸುವ 1 ಕ್ಯಾಲೋರಿಯು ಕಾರ್ಬೋಹೈಡ್ರೇಟ್ಗಳು ಅಥವಾ ಕೊಬ್ಬುಗಳಿಂದ ಪಡೆದ ಕ್ಯಾಲೊರಿಗಿಂತ ಹೆಚ್ಚಿನ ಶಕ್ತಿಯನ್ನು ಬೇಡುತ್ತದೆ.
ಉದಾಹರಣೆಗೆ, ಒಂದು ಡೋನಟ್ 31 ಗ್ರಾಂ ಕಾರ್ಬ್ಸ್, 3 ಗ್ರಾಂ ಪ್ರೋಟೀನ್ ಮತ್ತು 14 ಗ್ರಾಂ ಕೊಬ್ಬಿನಿಂದ ಒಟ್ಟು 260 kcal ಅನ್ನು ಹೊಂದಿರುತ್ತದೆ. ಅಂತೆಯೇ, ಒಂದು ಚಿಕನ್ ಸಲಾಡ್ ಸ್ಯಾಂಡ್ವಿಚ್ ಕೂಡ 260 ಕೆ.ಸಿ.ಎಲ್ ಅನ್ನು ಹೊಂದಿರುತ್ತದೆ. ಆದರೆ 28 ಗ್ರಾಂ ಕಾರ್ಬ್ಸ್, 15 ಗ್ರಾಂ ಪ್ರೋಟೀನ್ ಮತ್ತು 10 ಗ್ರಾಂ ಕೊಬ್ಬಿನಿಂದ. ಈಗ, ಎಲ್ಲಾ ಕ್ಯಾಲೊರಿಗಳು ಒಂದೇ ಆಗಿದ್ದರೆ, ಡೋನಟ್ ಸೇವನೆಯು ನಮ್ಮ ದೇಹದ ಮೇಲೆ ಚಿಕನ್ ಸ್ಯಾಂಡ್ವಿಚ್ನಂತೆಯೇ ಪರಿಣಾಮ ಬೀರಬೇಕು, ಅಲ್ಲವೇ?
ದಿನಕ್ಕೆ 250 ಕ್ಯಾಲೋರಿಗಳಷ್ಟು ಅಂತರದಿಂದ ಕೆಲವೇ ವರ್ಷಗಳಲ್ಲಿ ತೆಳ್ಳಗಾಗುವ ಅಥವಾ ಅಸ್ವಸ್ಥ ಸ್ಥೂಲಕಾಯತೆಯನ್ನು ಬೆಳೆಸುವ ಸಾಧ್ಯತೆ ಇದೆ. ಹಾಗಾದರೆ, ಕ್ಯಾಲೋರಿ ಲೆಕ್ಕವು ತೂಕ ನಿಯಂತ್ರಣಕ್ಕೆ ಪ್ರಮುಖವಾಗಿದ್ದರೆ, ಕ್ಯಾಲೊರಿ ಪರಿಕಲ್ಪನೆಯನ್ನು ಆವಿಷ್ಕರಿಸುವ ಮೊದಲೇ ಮಾನವರು ದೇಹದ ತೂಕದಲ್ಲಿ ಭಾರಿ ಬದಲಾವಣೆಗಳನ್ನು ತಪ್ಪಿಸಲು ಹೇಗೆ ಸಮರ್ಥರಾದರು?
ಮೂಲಗಳ ಆಧಾರದ ಮೇಲೆ ಕ್ಯಾಲೋರಿಗಳನ್ನು ನಿರ್ಧರಿಸುವುದು ಅವಶ್ಯಕವಾಗಿದೆ.
ತೂಕ ಇಳಿಸಲು ಊಟ ಬಿಡಬೇಕು
ಬಹುತೇಕೆ ಜನರು ತೂಕ ಇಳಿಸಿಕೊಳ್ಳಲು ಊಟ ಬಿಟ್ಟುಬಿಡಬೇಕು ಎಂದು ಭಾವಿಸುತ್ತಾರೆ. ದುರದೃಷ್ಟವಶಾತ್, ಊಟವನ್ನು ಬಿಡುವುದರಿಂದ ವಿರುದ್ಧ ಪರಿಣಾಮಗಳು ಉಂಟಾಗುತ್ತವೆ. ಇದು ಆರೋಗ್ಯ ಮತ್ತು ಜೀವನಶೈಲಿಯ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ. ಇದರಿಂದ ಭಾರೀ ಮೂಡ್ ಸ್ವಿಂಗ್ ಜೊತೆಗೆ ಹಸಿವನ್ನು ಅನುಭವಿಸುತ್ತಾರೆ, ಪರಿಣಾಮವಾಗಿ ತಿಂಡಿಪೋತರಾಗುತ್ತಾರೆ.
ಒಬ್ಬರು ಹಸಿವಿನಿಂದ ಬಳಲುತ್ತಿರುವಾಗ 2 ಸಂಗತಿಗಳು ಸಂಭವಿಸುತ್ತವೆ. ಒಂದು ಉಪವಾಸ-ಹಬ್ಬದ ಪರಿಣಾಮ – ಅಲ್ಲಿ ದೇಹವು ಅನಿಯಮಿತ ಆಹಾರವನ್ನು ಪಡೆಯುತ್ತದೆ. ಈ ಸಮಯದಲ್ಲಿ ಅವನು ಮುಂದಿನ ಆಹಾರವನ್ನು ಯಾವಾಗ ಪಡೆಯುತ್ತಾನೆ ಎಂದು ಮೆದುಳಿಗೆ ತಿಳಿದಿಲ್ಲವಾದ್ದರಿಂದ- ನೀವು ತಿನ್ನುವ ಎಲ್ಲಾ ಆಹಾರವನ್ನು ಸಂಗ್ರಹಿಸಲು ಪ್ರಾರಂಭಿಸುತ್ತದೆ. ಇದು ಕೊಬ್ಬಿನ ಶೇಖರಣೆ, ಕಡಿಮೆ ಶಕ್ತಿ ಮತ್ತು ಸಾಮಾನ್ಯ ಮಂದ ಸೆಳವುಗೆ ಕಾರಣವಾಗುತ್ತದೆ.
ಎರಡನೆಯದಾಗಿ, ಕಾರ್ಬೋಹೈಡ್ರೇಟ್ಗಳ ಅಲಭ್ಯತೆಯಿಂದಾಗಿ, ದೇಹವು ಸ್ನಾಯುಗಳನ್ನು ಇಂಧನ ಮೂಲವಾಗಿ ಬಳಸುತ್ತದೆ. ಇದು ಸ್ನಾಯು ಸವೆತಕ್ಕೆ ಕಾರಣವಾಗುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಕೊನೆಯದಾಗಿ ಆರೋಗ್ಯಕರ ತೂಕ ಇಳಿಕೆಯು ಕನಸಾಗಿಯೇ ಉಳಿಯುತ್ತದೆ.
ಫರ್ಷ್ಚಿಯ ಅಧ್ಯಯನದ ಪ್ರಕಾರ, ದಿನದ ಮುಖ್ಯ ಊಟವನ್ನು ಬಿಟ್ಟುಬಿಡುವುದು ಶಕ್ತಿಯ ಕಡಿಮೆ ಖರ್ಚಿಗೆ ಕಾರಣವಾಗುತ್ತದೆ, ಕಾರ್ಬೋಹೈಡ್ರೇಟ್ಗಳು ಮತ್ತು ಲಿಪಿಡ್ಗಳ ಚಯಾಪಚಯ ಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ ಮತ್ತು ಆಹಾರದ ಕಡಿಮೆ ಥರ್ಮೋಜೆನಿಕ್ ಪರಿಣಾಮದೊಂದಿಗೆ ಸಂಬಂಧಿಸಿದೆ. ಇದರಿಂದಾಗಿ ದೀರ್ಘಕಾಲೀನ ತೂಕ ಹೆಚ್ಚಳವಾಗುತ್ತದೆ.
ಬೆಳಗಿನ ಉಪಾಹಾರ ಸೇವಿಸುವುದು ಅವಶ್ಯಕ
ಇಲ್ಲ, ಇದು ಮಿಥ್ಯೆಯಲ್ಲ. ಬೆಳಗಿನ ಉಪಾಹಾರವನ್ನು ಬಿಡುವುದು ಅಧಿಕ ತೂಕ ಮತ್ತು ಬೊಜ್ಜಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಮುಖ್ಯ ಅಂಶವಾಗಿದೆ. ಇದರಿಂದ ಪೌಷ್ಠಿಕಾಂಶದ ಅಂತರವು ರೂಪುಗೊಳ್ಳುತ್ತದೆ ಮತ್ತು ದಿನದ ಉಳಿದ ಊಟಗಳಲ್ಲಿ ಅದನ್ನು ಸರಿದೂಗಿಸಲಾಗುವುದಿಲ್ಲ. ನಿತ್ರಾಣ, ಕಡಿಮೆ ಗಮನ ಮತ್ತು ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ. ವಾಸ್ತವವಾಗಿ, ಬೆಳಗಿನ ಉಪಾಹಾರವನ್ನು ಬಿಟ್ಟುಬಿಡುವವರು ಊಟಗಳ ನಡುವೆ ತಿಂಡಿ ತಿನ್ನಲು ಹಂಬಲಿಸುತ್ತಾರೆ.
ಇದು ನೋಡಿ, ರಾತ್ರಿ ಊಟದ ನಂತರ, ನಮ್ಮ ಮುಂದಿನ ಊಟವನ್ನು ಸರಾಸರಿ 10-11 ಗಂಟೆಗಳ ಅಂತರದ ನಂತರ ತಿನ್ನುತ್ತೇವೆ. ರಾತ್ರಿಯಲ್ಲಿ ನಿದ್ದೆ ಮಾಡುವಾಗ, ನಮ್ಮ ಮೆದುಳು ವಿಶ್ರಾಂತಿ ಪಡೆಯುವುದಿಲ್ಲ. ಅದು ನಿರಂತರವಾಗಿ ಶಕ್ತಿಯನ್ನು ಗ್ಲೂಕೋಸ್ ರೂಪದಲ್ಲಿ ಬಳಸಿಕೊಳ್ಳುತ್ತದೆ. ಪರಿಣಾಮವಾಗಿ, ನಮ್ಮ ಸಕ್ಕರೆ ಮಟ್ಟವು ನಾವು ಏಳುವ ಹೊತ್ತಿಗೆ ಮತ್ತು ಪಾತಾಳ ಮುಟ್ಟಿರುತ್ತದೆ. ಆದ್ದರಿಂದ, ಬೆಳಗಿನ ಉಪಾಹಾರಕ್ಕೆ ಹಿಂದಿನ ಕಾಲದಲ್ಲಿ ಮತ್ತು ಈಗ ಕೂಡ ಏಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಬೆಳಗಿನ ಉಪಾಹಾರವು ನಮ್ಮನ್ನು ರಿಚಾರ್ಜ್ ಮಾಡುತ್ತದೆ ಎಂಬುದರ ಹೊರತಾಗಿ, ಇದು ದಿನದ ಅಡೆತಡೆಗಳನ್ನು ಮತ್ತು ಗದ್ದಲವನ್ನು ಸಹಿಸಲು ಶಕ್ತಿಯನ್ನು ಸಹ ಉಳಿಸುತ್ತದೆ.
ಕುರುಕಲು ತಿಂಡಿ ಸಂಪೂರ್ಣವಾಗಿ ಕೆಟ್ಟ ಕಲ್ಪನೆ
ಸ್ನ್ಯಾಕಿಂಗ್ ಎಲ್ಲರಿಗೂ ಒಳ್ಳೆಯದಲ್ಲ. ಕುರುಕಲು ತಿಂಡಿ ಅಭ್ಯಾಸವಾದರೆ ಹಸಿವನ್ನು ಹಾಳು ಮಾಡುತ್ತದೆ. ನೀವು ತಿನ್ನುವ ಅಭ್ಯಾಸವನ್ನು ಟ್ರ್ಯಾಕ್ ಮಾಡುವ ಮೂಲಕ ಅಚ್ಚುಕಟ್ಟಾಗಿ ತಿನ್ನಿರಿ.
ಒಬ್ಬರು ತಿಂಡಿ ತಿನ್ನುತ್ತಿದ್ದರೆ ಅದು ಹಸಿವಿನಿಂದಲೇ ಆಗಿರಬೇಕಿಲ್ಲ. ಅಲ್ಲಿ ಒತ್ತಡ ಮತ್ತು ಭಾವನಾತ್ಮಕತೆಯೂ ಆಹಾರದೊಂದಿಗೆ ಬಲವಾದ ಸಂಬಂಧವಿರಬಹುದು. ಆದ್ದರಿಂದ, ಒಬ್ಬ ವ್ಯಕ್ತಿಯು ಪುನರಾವರ್ತಿತ ಅಥವಾ ದೀರ್ಘಕಾಲದ ಒತ್ತಡಕ್ಕೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಕೇಡುಗಳನ್ನು ತಡೆಯಲು ಬುದ್ದಿವಂತಿಕೆಯಿಂದ ತಿನ್ನುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
ಹೆಚ್ಚಿನ ಕೊಬ್ಬು, ಕಾರ್ಬ್ ಮತ್ತು ಸಕ್ಕರೆ ಇರುವ ಆಹಾರಕ್ಕಿಂತ ಬೀಜಗಳು, ಹಣ್ಣುಗಳಂತಹ ಆರೋಗ್ಯಕರ ತಿಂಡಿಗಳನ್ನು ಆರಿಸುವುದು ಮುಖ್ಯ.
ತೂಕ ಇಳಿಸಿಕೊಳ್ಳಲು, ನೀವು ಕೊಬ್ಬು ಮತ್ತು ಕಾರ್ಬ್ಸ್ ಅನ್ನು ಕೈ ಬಿಡಬೇಕು
ಖಂಡಿತವಾಗಿಯೂ, ಯಾವುದೇ ಕಡಿಮೆ ಕಾರ್ಬ್ ಆಹಾರ ಕ್ರಮದ ಪ್ರಮುಖ ಭಾಗವೆಂದರೆ ಆಹಾರದಲ್ಲಿ ನಾರಿನಂಶವನ್ನು ಹೆಚ್ಚಿಸುವುದು. ಫೈಬರ್ ಒಂದು ಸಂಕೀರ್ಣ ಕಾರ್ಬೋಹೈಡ್ರೇಟ್, ಆದ್ದರಿಂದ ನೀವು ‘ಕಡಿಮೆ ಕಾರ್ಬ್ ಆಹಾರ’ದ ಬಗ್ಗೆ ಕೇಳಿದಾಗ ಜಾಗರೂಕರಾಗಿರಿ. ಇದು ಸಕ್ಕರೆ, ಪಿಷ್ಟ ತರಕಾರಿಗಳು ಮತ್ತು ಸಂಸ್ಕರಿಸಿದ ಹಿಟ್ಟಿನಂತಹ ಸರಳ ಕಾರ್ಬೋಹೈಡ್ರೇಟ್ನ ನಿರ್ಬಂಧವನ್ನು ಮಾತ್ರ ಒಳಗೊಂಡಿರಬೇಕು ಮತ್ತು ಹೆಚ್ಚಿನ ಫೈಬರ್ ತರಕಾರಿಗಳನ್ನು ಒಳಗೊಂಡಿರಬೇಕು.
ಮತ್ತೊಂದೆಡೆ ಕೊಬ್ಬು ನಮ್ಮ ಆಹಾರದಲ್ಲಿ ಅವಶ್ಯಕ. ‘ಕೊಬ್ಬು ನಿಮ್ಮನ್ನುಕೊಬ್ಬಿಸುವುದಿಲ್ಲ’. ಇದು ನಮ್ಮ ಸಮುದಾಯದಲ್ಲಿ ಬಹಳ ಹಿಂದಿನಿಂದಲೂ ‘ಕೆಟ್ಟ’ ಎಂದು ಹಣೆಪಟ್ಟಿ ಕಟ್ಟಲ್ಪಟ್ಟ ಆಹಾರಗಳಲ್ಲಿ ಒಂದಾಗಿದೆ. ಆದರೆ ಇಂದು ಭಾರತದಾದ್ಯಂತ ಪೌಷ್ಟಿಕತಜ್ಞರು ಕೂದಲು, ಚರ್ಮ, ಮಲಬದ್ಧತೆ ಅಥವಾ ರೋಗನಿರೋಧಕ ಶಕ್ತಿಗಾಗಿ ಇದನ್ನು ಉತ್ತೇಜಿಸುತ್ತಿದ್ದಾರೆ. ಸರಿಯಾದ ಕೊಬ್ಬಿನ ಆಯ್ಕೆಗಳು ನಮ್ಮನ್ನು ದಪ್ಪವಾಗಿಸುವುದಕ್ಕಿಂತ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೋಲ್ಡ್ ಪ್ರೆಸ್ಡ್ ಎಣ್ಣೆಗಳು, ಆರೋಗ್ಯಕರ ಕೊಬ್ಬಿನಾಮ್ಲ ಪ್ರೊಫೈಲ್ ಹೊಂದಿರುವ ದೇಸಿ ತುಪ್ಪ ಸಹಕಾರಿ.
ಜೆನೆಟಿಕ್ಸ್ ಮತ್ತು ತೂಕ ನಷ್ಟ – ಕೊಬ್ಬಿನ ರಹಸ್ಯ ಜೀವನ
“ಇದು ನನ್ನ ಜೀನ್ ನಲ್ಲಿದೆ!” ನಾವು ಬೊಜ್ಜು ದೇಹ ಹೊಂದಿದ್ದರೆ ನಮ್ಮ ಪೋಷಕರ ಜೀನ್ ಅನ್ನು ದೂಷಿಸುತ್ತೇವೆ. ಅಧಿಕ ತೂಕ ಹೊಂದಲು ವಂಶಪಾರಂಪರ್ಯ ಕಾರಣವಾಗಿರಬಹುದು, ಆದರೆ ಇದರರ್ಥ ಅವರು ಬೊಜ್ಜು ದೇಹವನ್ನೇ ಹೊಂದಿರಬೇಕು ಎಂದಲ್ಲ. ಕಾಲಾನಂತರದಲ್ಲಿ ವಿಕಸನಗೊಂಡ ‘ಮಿತವ್ಯಯದ ಜೀನ್’ ಜೊತೆಗೆ ಆನುವಂಶಿಕ ವ್ಯತ್ಯಾಸವು ಕೆಲವರು ಏಕೆ ಬೊಜ್ಜು ಹೊಂದಿದ್ದಾರೆ, ಮತ್ತು ಕೆಲವರಿಗೆ ಬೊಜ್ಜಿಲ್ಲ ಹಾಗೂ ಎಪಿಜೆನೆಟಿಕ್ ಅಂಶಗಳು (ವಯಸ್ಸು/ಪರಿಸರ/ಜೀವನಶೈಲಿ) ಬೇರೆಯದೇ ಉತ್ತರವನ್ನು ನೀಡುತ್ತದೆ.
ಎಫ್ಟಿಒ ಜೀನ್ ಅಥವಾ ಬೊಜ್ಜು ಜೀನ್ ಎಂದು ಕರೆಯಲ್ಪಡುವ ಜೀನ್ ತೂಕ ಇಳಿಸುವುದನ್ನು ತಡೆಯುತ್ತದೆ ಮತ್ತು ಹೆಚ್ಚು ಕೊಬ್ಬಿನ ಆಹಾರವನ್ನು ಬೇಡುತ್ತದೆ. ಆದರೆ ಜೀನ್ ಹೇಳುವುದೇ ಅಂತಿಮ ಎನ್ನುವುದು ಇಲ್ಲಿಲ್ಲ. ದೈಹಿಕವಾಗಿ ಸಕ್ರಿಯರಾಗಿರುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದರಿಂದ ಆನುವಂಶಿಕ ಪ್ರವೃತ್ತಿಯನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡಬಹುದು (2)
ತೆಳ್ಳಗಿದ್ದರೆ ಆರೋಗ್ಯಕರ, ಕೊಬ್ಬು ಅನಾರೋಗ್ಯಕರ
ತೆಳ್ಳಗಿರಬೇಕೆಂದು ನಾವೆಲ್ಲರೂ ಬಯಸುತ್ತೇವೆ.
ಒಬ್ಬ ವ್ಯಕ್ತಿ ಕಳಪೆ ಜೀವನ ಶೈಲಿ ಮತ್ತು ಕೆಟ್ಟ ತಿನ್ನುವ ಚಾಳಿಯನ್ನು ಹೊಂದಿದ್ದರೆ ಆತ ತೆಳ್ಳಗಿದ್ದರೂ, ಬೊಜ್ಜು ಹೊಂದಿದ್ದರೂ ಆರೋಗ್ಯಕರವಾಗಿರಲಾರ.
ಹಾಗೆಂದು ಯಾರಾದರೂ ತೆಳ್ಳಗೆ ಇರುವವರು ಬಯಸಿದ ಯಾವುದನ್ನಾದರೂ ತಿನ್ನಬಹುದು ಮತ್ತು ನಿಯಮಿತ ದೈಹಿಕ ಚಟುವಟಿಕೆಯನ್ನು ಬಿಟ್ಟುಬಿಡಬಹುದು ಎಂದು ಅರ್ಥವಲ್ಲ. ವಾಸ್ತವವಾಗಿ, ಅನಾರೋಗ್ಯಕರವಾಗಿ ತಿನ್ನುವ ‘ತೆಳ್ಳಗಿನ’ ವ್ಯಕ್ತಿಗಳು ಹೆಚ್ಚಿನ ಟಿಜಿಎಲ್ ಮಟ್ಟವನ್ನು ಹೊಂದಿರುತ್ತಾರೆ, ಎಚ್ಡಿಎಲ್ ಮಟ್ಟವನ್ನು ಕಡಿಮೆ ಮಾಡುತ್ತಾರೆ ಮತ್ತು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತಾರೆ ಎಂದು ಕಂಡುಬಂದಿದೆ. ಹೊಸ ಕೊಬ್ಬಿನ ಕೋಶಗಳನ್ನು ರಚಿಸಿಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ ಮತ್ತು ಕೊಬ್ಬು ಒಳಾಂಗಗಳಲ್ಲಿ (ಎಲ್ಲಾ ಅಂಗಗಳ ಸುತ್ತಲೂ) ಸಂಗ್ರಹವಾಗಲು ಪ್ರಾರಂಭಿಸುತ್ತದೆ ಮತ್ತು ಕಡಿಮೆ ಸಬ್ಕ್ಯುಟೇನಿಯಸ್ ಕೊಬ್ಬನ್ನು ಹೊಂದಿರುತ್ತದೆ (ಚರ್ಮದ ಕೆಳಗಿನ ಪದರ). ಇದು ಅಪಾಯಕಾರಿ.
ಬೊಜ್ಜು ಇರುವ ವ್ಯಕ್ತಿಗಳಲ್ಲಿ ಕೊಬ್ಬು ಚರ್ಮದ ಕೆಳಗಿನ ಪದರಗಳಲ್ಲಿ ಸಂಗ್ರಹವಾಗುತ್ತದೆ ಮತ್ತು ಕುಶನಿಂಗ್ ಹಾಗೂ ನಿರೋಧನದ ಜೊತೆಗೆ ಶಕ್ತಿಯ ದಾಸ್ತಾನನ್ನು ಒದಗಿಸುತ್ತದೆ. ಇದು ಒಳಾಂಗಗಳ ಕೊಬ್ಬಿಗೆ ಹೋಲಿಸಿದರೆ ನಿಜವಾದ ಬೆದರಿಕೆಯಲ್ಲ. ಅವರು ಕೊಬ್ಬನ್ನು (ಬ್ರೌನ್ ಅಡಿಪೋಸೈಟ್ಗಳು) ಸಂಗ್ರಹಿಸುವ ಹೊಸ ಕೊಬ್ಬಿನ ಕೋಶಗಳನ್ನು ರಚಿಸುತ್ತಲೇ ಇರುತ್ತಾರೆ.
ತೆಳ್ಳಗಿನ ಅನಾರೋಗ್ಯಕರ ವ್ಯಕ್ತಿಗಿಂತ ಖಂಡಿತವಾಗಿಯೂ ಹೆಚ್ಚು ಆರೋಗ್ಯಕರವಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಹೊಂದಿರುವ ಅನೇಕ ಕೊಬ್ಬಿದ ಜನರಿದ್ದಾರೆ ಎಂಬುದನ್ನು ಮರೆಯಬಾರದು.
ಸತತವಾಗಿ ತಿನ್ನುವುದು ಮತ್ತು ವ್ಯಾಯಾಮ ಮಾಡುವುದರಿಂದ ತೂಕ ಹೆಚ್ಚಾಗುವುದನ್ನು ತಡೆಯಬಹುದು
ನಮ್ಮ ದೇಹವು ಶಕ್ತಿಯನ್ನು ಎರಡು ರೂಪಗಳಲ್ಲಿ ಸಂಗ್ರಹಿಸುತ್ತದೆ: ಕೊಬ್ಬು ಮತ್ತು ಗ್ಲೈಕೋಜೆನ್. ವ್ಯಾಯಾಮದ ಶೈಲಿ, ತೀವ್ರತೆ ಮತ್ತು ಆವರ್ತನವನ್ನು ಅವಲಂಬಿಸಿ ಗ್ಲೈಕೋಜೆನ್ ದಾಸ್ತಾನು ಬದಲಾಗುತ್ತಿರುತ್ತದೆ ಮತ್ತು ಕೊಬ್ಬಿನ ಸಂಗ್ರಹವು ಪ್ರಸ್ತುತ ಜೀವನಶೈಲಿಯನ್ನು ಆಧರಿಸಿದೆ.
ಕ್ಯಾಲೊರಿಗಳನ್ನು ಕಡಿಮೆ ತೆಗೆದುಕೊಂಡು ವ್ಯಾಯಾಮದ ಮೂಲಕ ಹೆಚ್ಚು ಕ್ಯಾಲೋರಿ ಖರ್ಚು ಮಾಡುವುದರಿಂದ ದೀರ್ಘಕಾಲದಲ್ಲಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವುದಿಲ್ಲ. ಕ್ಯಾಲೊರಿ ಸೇವನೆಯನ್ನು ಸರಿದೂಗಿಸಲು ಒಬ್ಬ ವ್ಯಕ್ತಿಯು ತನ್ನ 20 ರ ಹರೆಯದಲ್ಲಿ ವಾರಕ್ಕೆ ಇಪ್ಪತ್ತು ಮೈಲುಗಳಷ್ಟು ಓಡುತ್ತಾನೆ ಎಂದು ಊಹಿಸಿ. ಹಾಗಾದಲ್ಲಿ ಅವನು ತನ್ನ ಮೂವತ್ತರ ಪ್ರಾಯದಲ್ಲಿ ಓಟವನ್ನು ದ್ವಿಗುಣಗೊಳಿಸಬೇಕಾಗುತ್ತದೆ.
ಕ್ಯಾಲೊರಿ-ಇನ್/ಕ್ಯಾಲೊರಿ-ಔಟ್ ಎಂದು ನಾವು ನಂಬಿದರೆ, ನಮ್ಮ ತೂಕ ಕಾಪಾಡಿಕೊಳ್ಳಲು ನಾವು ವಾರದಲ್ಲಿ ಐದು ದಿನ ಅರ್ಧ ಮ್ಯಾರಥಾನ್ಗಳನ್ನು ಓಡಬೇಕಾಗಬಹುದು. ಹಾಗಾಗಿ ಈಗ ನಾವು ಸೇವಿಸುವ ಮತ್ತು ಖರ್ಚು ಮಾಡುವ ಕ್ಯಾಲೊರಿಗಳನ್ನು ಹೊರತುಪಡಿಸಿ ಬೇರೆ ಏನಾದರೂ ಇದೆಯೇ ಎಂದು ಪ್ರಶ್ನಿಸುವ ಸಮಯ ಬಂದಿದೆ. ಇದು ನಾವು ತೂಕವನ್ನು ಹೆಚ್ಚಿಸುತ್ತೇವೆಯೇ ಅಥವಾ ಕಳೆದುಕೊಳ್ಳುತ್ತೇವೆಯೇ ಎಂದು ನಿರ್ಧರಿಸುತ್ತದೆ.
ನಾವು ವ್ಯಾಯಾಮ ಮಾಡುವಾಗ ನೀರಿನ ರೂಪದಲ್ಲಿರಬಹುದಾದ ತೂಕವನ್ನು ಕಳೆದುಕೊಳ್ಳುತ್ತೇವೆ. ಕೊಬ್ಬನ್ನು ಕಳೆದುಕೊಳ್ಳುವುದು ಮತ್ತು ತೂಕವನ್ನು ಕಳೆದುಕೊಳ್ಳುವುದು ಒಂದೇ ಅಲ್ಲ. ನಾವು ವ್ಯಾಯಾಮ ಮಾಡುವಾಗ ನಾವು ಉತ್ತಮ ಸ್ನಾಯುಗಳನ್ನು ನಿರ್ಮಿಸುತ್ತೇವೆ ಮತ್ತು ಪ್ರತಿ ವ್ಯಾಯಾಮದ ನಂತರ ನಾವು ತೂಕ ನೋಡಿದರೆ ಅದು ವ್ಯತ್ಯಾಸಗೊಳ್ಳುವುದನ್ನು ಕಾಣಬಹುದು.
ಡಯಟ್ ಆಹಾರಗಳು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ
ಎಲ್ಲಕ್ಕಿಂತ ಕೆಟ್ಟ ಮಿಥ್ಯೆಯೆಂದರೆ ಜನರು ತಮ್ಮ ಸಾಮಾನ್ಯ ಆಹಾರವನ್ನು ಬಿಟ್ಟು ‘ಕಡಿಮೆ ಕೊಬ್ಬು’ ಎಂದು ಹೆಸರಿಸಲಾದ ಡಯಟ್ ಆಹಾರಗಳಿಗೆ ಬಲಿಯಾಗುವುದು. ಅವು ಸಾಮಾನ್ಯವಾಗಿ ಸಂಸ್ಕರಿಸಿದ ಮತ್ತು ಪ್ಯಾಕೇಜ್ ಮಾಡಲಾದ ಹೈಡ್ರೋಜನೀಕರಿಸಿದ ಆಹಾರಗಳಾಗಿರುತ್ತವೆ. ಅಂತಹ ಆಹಾರಗಳಲ್ಲಿ ಅವುಗಳ ಪೂರ್ಣ ಪ್ರಮಾಣದ ಪೋಷಕಾಂಶಗಳು ಇರುವುದೇ ಇಲ್ಲ.
ಮಾರುಕಟ್ಟೆಯಲ್ಲಿ ತೂಕವನ್ನು ಕಡಿಮೆ ಮಾಡುವುದಾಗಿ ಹೇಳಿಕೊಳ್ಳುವ ಎಲ್ಲಾ ರೀತಿಯ ಪೂರಕ ಆಹಾರಗಳನ್ನು ಕಾಣಬಹುದು. ಒಮ್ಮೆ ನಾವು ಇವುಗಳ ಬಲೆಗೆ ಬಿದ್ದರೆ, ಅದು ಒಂದು ರೀತಿಯ ಪ್ಲಸೀಬೊ ಪರಿಣಾಮವನ್ನು ಸೃಷ್ಟಿಸುತ್ತದೆ ಮತ್ತು ನಮ್ಮ ಆಹಾರ ಆಯ್ಕೆಗಳ ಬಗ್ಗೆ ನಾವು ಹೆಚ್ಚು ಜಾಗೃತರಾಗಿರುತ್ತೇವೆ. ಆಹಾರ ಪೂರಕಗಳು ಸುಳ್ಳು ಸುಳ್ಳೇ ತೂಕ ನಷ್ಟವನ್ನು ಸೃಷ್ಟಿಸುತ್ತವೆ ಮತ್ತು ಈ ಫಲಿತಾಂಶಗಳು ಕಡಿಮೆ ಅವಧಿಯದ್ದು ಎಂದು ಸಾಬೀತಾಗಿವೆ. ದೀರ್ಘಕಾಲೀನ ಅನಾನುಕೂಲಗಳು ಮತ್ತು ಈ ರೀತಿಯ ಆಹಾರ ಪದ್ಧತಿಯ ಯೋ-ಯೋ ಪರಿಣಾಮವನ್ನು ನಿರ್ಲಕ್ಷಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಸಂಪೂರ್ಣ/ನೈಸರ್ಗಿಕ ಆಹಾರಗಳಿಗೆ ಅಂಟಿಕೊಳ್ಳಿ ಮತ್ತು ಸಂಸ್ಕರಿಸಿದ ಆಹಾರಗಳಿಂದ ದೂರವಿರಿ.
ತೂಕವನ್ನು ಕಳೆದುಕೊಳ್ಳುವುದು ನೇರ ದಾರಿ
ನಾವು ಡಯಟ್ ಅಥವಾ ವ್ಯಾಯಾಮಕ್ಕೆ ಡೆಟೋಕ್ಸ್ ಡಯಟ್, ಫ್ರೂಟ್ ಡಯಟ್ ಮೊದಲಾದ ಅವಾಸ್ತವಿಕ ವಿಧಾನಗಳನ್ನುಅನುಸರಿಸುತ್ತೇವೆ. ವರ್ಷಗಳ ಕಾಲದಲ್ಲಿ ರೂಪುಗೊಂಡ ಬೊಜ್ಜು ದೇಹವನ್ನು ವಾರಗಳಲ್ಲಿ ಇಳಿಸುವುದು ಹೇಗೆ ಸಾಧ್ಯ? ದೀರ್ಘ ದಾರಿ ಖಂಡಿತಾ ಗುರಿ ಮುಟ್ಟುತ್ತದೆ ಮತ್ತು ತೂಕ ಇಳಿಸಲು ಯಾವುದೇ ಕಳ್ಳದಾರಿಗಳು ಇಲ್ಲ. ಕಳ್ಳದಾರಿಗಳು ತಾತ್ಕಾಲಿಕ ಫಲಿತಾಂಶ ನೀಡಿದರೂ ದೀರ್ಘ ಕಾಲದಲ್ಲಿ ವ್ಯತಿರಿಕ್ತ ಪರಿಣಾಮವನ್ನು ಖಂಡಿತಾ ಬೀರುತ್ತದೆ.
ಹಠಾತ್ ಸುದ್ದಿಯಾಗುವ ಡಯಟ್ ಆಹಾರಗಳನ್ನು ಅನುಸರಿಸುವ ಚಾಳಿಯನ್ನು ಬಿಟ್ಟು ಬಿಡಿ. ಅವು ಭಾರೀ ತೂಕ ಇಳಿಸುವ ವಾಗ್ದಾನ ನೀಡುತ್ತವೆಯಾದರೂ ನಿಮ್ಮ ಗುರಿಯನ್ನು ತಲುಪುವುದೇ ಇಲ್ಲ. ಬದಲಾಗಿ ಸ್ಥಿರವಾದ ಡಯಟ್ ಪ್ಲಾನ್ ಅನುಸರಿಸಿ, ಅದು ತೂಕ ಇಳಿಸಲು ಬಲವಾದ ಇಚ್ಛಾಶಕ್ತಿಯನ್ನು ಒದಗಿಸುತ್ತದೆ.
(2) https://academic.oup.com/ajcn/article/105/5/1204/4637724
-ವಿಸ್ಮಿತಾ ಯಶವಂತ್
ಪೋಷಕಾಹಾರ ತಜ್ಞೆ
You may also like our other blogs :
Don’t let your snack cravings interfere with your fitness goals