ಉಪ್ಪು, ಸಕ್ಕರೆ, ಕೊಬ್ಬು ಪುಸ್ತಕವು ಯಾವುದೇ ಸಂಸ್ಕರಿಸಿದ ಆಹಾರವನ್ನು ತಿನ್ನುವ, ಅಥವಾ ಎಂದಾದರೂ ತಿಂದಿರುವ ಎಲ್ಲರಿಗೂ ಸಂಬಂಧಿಸಿದೆ.
ಪುಲಿಟ್ಜೆರ್-ಬಹುಮಾನ ವಿಜೇತ ಪತ್ರಕರ್ತ ಮೈಕೆಲ್ ಮಾಸ್ ಬರೆದ, ಇದು ದೊಡ್ಡ ಆಹಾರ ಕಂಪನಿಗಳು ಗ್ರಾಹಕರನ್ನು ಸೆಳೆಯಲು ತಮ್ಮ ಉತ್ಪನ್ನಗಳಲ್ಲಿ ಪ್ಯಾಕ್ ಮಾಡುವ ಅಗ್ಗದ, ಸುವಾಸನೆಯ ಭರ್ತಿಸಾಮಾಗ್ರಿಗಳ ಹೆಚ್ಚುತ್ತಿರುವ ಪ್ರಮಾಣವನ್ನು ವಿವರಿಸುತ್ತದೆ.
ಕಥೆಯು ಥ್ರಿಲ್ಲರ್ನಂತೆ ಪ್ರಾರಂಭವಾಗುತ್ತದೆ: ಕ್ರಾಫ್ಟ್, ಕೋಕಾ-ಕೋಲಾ, ಕೆಲ್ಲಾಗ್, ನೆಸ್ಲೆ, ಪಿಲ್ಸ್ಬರಿ, ಕಾರ್ಗಿಲ್ ಸೇರಿದಂತೆ ವಿಶ್ವದ ಅತ್ಯಂತ ಶಕ್ತಿಶಾಲಿ (ಲಾಭದಾಯಕ ಎಂದೂ ಓದಿ!) ಆಹಾರ ಬ್ರಾಂಡ್ಗಳ ಮುಖ್ಯಸ್ಥರ ಸಭೆಯಲ್ಲಿ. 1999ರಲ್ಲಿ ನಡೆದ ಈ ಸಮಾವೇಶವು ಮಧುಮೇಹ, ಹೃದ್ರೋಗ, ಅಸ್ಥಿಸಂಧಿವಾತ, ಕ್ಯಾನ್ಸರ್ ಇತ್ಯಾದಿಗಳನ್ನು ಒಳಗೊಂಡಂತೆ ಬೊಜ್ಜಿನ ಭಾರೀ ಸಾಮಾಜಿಕ ವೆಚ್ಚವನ್ನು ವಿವರಿಸಿದೆ. ಇವೆಲ್ಲವೂ ಆಹಾರದೊಂದಿಗೆ ನೇರವಾಗಿ ಸಂಪರ್ಕ ಹೊಂದಿವೆ, ಮತ್ತು ಈ ಕಂಪನಿಗಳು ಮಾರಾಟ ಮಾಡುತ್ತಿದ್ದ ಆಹಾರಗಳೊಂದಿಗೂ ಸಹ.
ಈ ಕಂಪನಿಗಳು ಆರೋಗ್ಯದೆದುರು ಹೆಚ್ಚಿನ ಲಾಭವನ್ನು ಆರಿಸಿಕೊಂಡಿವೆ ಎಂದು ಇಂದು ನಮಗೆ ತಿಳಿದೇ ಇದೆ.
ಉಪ್ಪು, ಸಕ್ಕರೆ ಮತ್ತು ಕೊಬ್ಬು – ಈ ಆಹಾರ ಉತ್ಪನ್ನಗಳ ಹಸಿವನ್ನುಂಟುಮಾಡುವ ಮೂರು ಪ್ರಮುಖ ಪದಾರ್ಥಗಳ ಕುರಿತಾದ 3 ಭಾಗಗಳ ಪುಸ್ತಕವಾಗಿದೆ.
ಕಣ್ತೆರೆಸುವ ಸಂಶೋಧನೆಯಲ್ಲಿ ನೆಲೆಗೊಂಡಿರುವ ಈ ಪುಸ್ತಕವು ವಿಜ್ಞಾನಿಗಳು, ಕೈಗಾರಿಕೋದ್ಯಮಿಗಳು ಮತ್ತು ಸಂಶೋಧಕರ ಸಂದರ್ಶನಗಳ ಮೂಲಕ ಸಂಸ್ಕರಿಸಿದ ಆಹಾರ ಉದ್ಯಮದ 3 ಸ್ತಂಭಗಳ ಏರಿಕೆಯನ್ನು ವಿಶ್ಲೇಷಿಸುತ್ತದೆ. ವಿಜ್ಞಾನ ಮತ್ತು ಮನೋವಿಜ್ಞಾನದ ಅನ್ವೇಷಣೆ, ಸಂಸ್ಕರಿಸಿದ ಆಹಾರ ಬ್ರಾಂಡ್ಗಳು ಆನಂದಿಸುವ ಬದುಕಿಗಿಂತ ದೊಡ್ಡದಾದ ಚಿತ್ರಣವನ್ನು ನಿರ್ಮಿಸುವ ಸಂಶೋಧನಾ ವಿಧಾನ ಮತ್ತು ಮಾರ್ಕೆಟಿಂಗ್ ತಂತ್ರಗಳನ್ನು ಬಯಲಾಗಿಸಿದೆ.
ಭಾಗ 1 ಸಕ್ಕರೆಯ ಕುರಿತು ವಿಶ್ಲೇಸಿಸುತ್ತದೆ.
ಅಥವಾ ಮಗುವಿನ ಜೀವಶಾಸ್ತ್ರವನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು.
“ಸಿಹಿತಿಂಡಿಗಾಗಿ ನಾವು ಹುಟ್ಟಿನಿಂದಲೇ ಹಂಬಲಿಸುತ್ತೇವೆ” ಎನ್ನುವ ಮೂಲಕ ಈ ವಿಭಾಗವು ಪ್ರಾರಂಭಗೊಳ್ಳುತ್ತದೆ. ಮಾಸ್ ಅವರು ಇಲ್ಲಿ ನಮ್ಮ ಟೇಸ್ಟ್ ಬಡ್ಸ್ಗಳ ‘ಆನಂದದ ಬಿಂದುವನ್ನು’ ಕಂಡುಹಿಡಿಯುವ ಸಂಶೋಧನೆಯನ್ನು ಪಾಚಿ ನಿಖರವಾಗಿ ತೆರೆದಿಡುತ್ತಾರೆ. ಈ ಮೂಲಕ ಕಂಪನಿಗಳು ತಮ್ಮ ಉತ್ಪನ್ನಗಳಿಗಾಗಿ ಹಂಬಲಿಸುವಂತೆ ಮಾಡಲು ಅಗತ್ಯವಾದ ಸಕ್ಕರೆಯ ಪ್ರಮಾಣವನ್ನು ರೂಪಿಸುತ್ತವೆ. ನಾವೆಲ್ಲರೂ ಸಿಹಿ ಹಲ್ಲಿನೊಂದಿಗೆ ಜನಿಸಿದ್ದೇವೆ ಮತ್ತು ಮಗುವಿನ ಬಯಕೆ ಮತ್ತು ಸಕ್ಕರೆಯ ಮಿತಿ ಹೆಚ್ಚಿರುವುದರಿಂದ, ಈ ಸಕ್ಕರೆ ತುಂಬಿದ ಹಿಂಸೆಗೆ ನೈಸರ್ಗಿಕ ಗುರಿ ಮಗು.
ಸಕ್ಕರೆಯೆನ್ನುವುದು ವ್ಯಸನಕಾರಿ.
ಕೊಕೇನ್ಗೆ ಮೆದುಳು ಸ್ಪಂದಿಸುವಂತೆಯೇ ಸಕ್ಕರೆಗೂ ಸ್ಪಂದಿಸುತ್ತದೆಯೆನ್ನುವುದನ್ನು ಸಂಶೋಧನೆ ತೋರಿಸುತ್ತದೆ. ಹಾಗಾದರೆ ಇಂದು ಸೂಪರ್ ಮಾರ್ಕೆಟ್ಗಳ ಕಪಾಟಿನಲ್ಲಿರುವ ಹೆಚ್ಚಿನ ಪ್ಯಾಕೇಜ್ ಮಾಡಲಾದ ಆಹಾರಗಳಲ್ಲಿ ಸಕ್ಕರೆ ಏಕೆ ಪ್ರಮುಖ ಅಂಶವಾಗಿದೆ? ಮತ್ತು ಆಹಾರ ಕಂಪನಿಗಳು ಅದನ್ನು ಏಕೆ ತೀವ್ರವಾಗಿ ಸಮರ್ಥಿಸಿಕೊಳ್ಳುತ್ತವೆ? ಏಕೆಂದರೆ ಇದು ಕೇವಲ ಆಹಾರ ಕಂಪನಿಗಳಿಗೆ ಅಮೂಲ್ಯವಾದ ರುಚಿಗೆ ಮಾತ್ರವಲ್ಲ, ಇದು ಬೃಹತ್, ವಿನ್ಯಾಸ, ಹೊಳಪಿನ ಮಟ್ಟ, ಗರಿಗರಿಯಾಗಿಸುವಿಕೆ, ಬಣ್ಣ ಇತ್ಯಾದಿಗಳಿಗೂ ನಿರ್ಣಾಯಕವಾಗಿದೆ. ವಾಸ್ತವವಾಗಿ ಸಕ್ಕರೆಯನ್ನು ಮಿತಿಗೊಳಿಸಿ ಮತ್ತು ಉತ್ಪತ್ತಿಯಾಗುವ ವಸ್ತುಗಳು“… ಕುಗ್ಗಿದ, ಮಸುಕಾದ, ಚಪ್ಪಟೆ ಅಥವಾ ವಿಸ್ತಾರವಾದ ರೂಪದಲ್ಲಿರುತ್ತವೆ.” ಅನಾಕರ್ಷಕವಾಗಿ ತೋರುತ್ತದೆಯಲ್ಲವೇ?
ಕೆಲ್ಲಾಗ್ಸ್ನ ಕಥೆಗಳು ಆರೋಗ್ಯಕರ ಉಪಾಹಾರದಿಂದ ಸಕ್ಕರೆ ತುಂಬಿದ ಹೆಪ್ಪುಗಟ್ಟಿದಂತಹ ಫ್ಲೇಕ್ಸ್, ಪೆಪ್ಸಿ ಮತ್ತು ಕೋಕ್ ಯುದ್ಧಗಳು ಮತ್ತು ಮಾರ್ಲ್ಬೊರೊದ ಹಿಂದಿನ ಮಾಲೀಕ ಫಿಲಿಪ್ ಮೋರಿಸ್, ಈಗಿನ ಎರಡು ದೊಡ್ಡ ಆಹಾರ ಕಂಪನಿಗಳ ಮಾಲೀಕ: ಜನರಲ್ ಫುಡ್ಸ್ ಮತ್ತು ಕ್ರಾಫ್ಟ್.
ಭಾಗ 2 ಕೊಬ್ಬಿನ ಕುರಿತು ಹೇಳುತ್ತದೆ
ಆಹಾರದ ಮೇಲೆ ಕೊಬ್ಬಿನ ಮಾಂತ್ರಿಕ ಪರಿಣಾಮ.
ಕೊಬ್ಬಿನ ರುಚಿಯನ್ನು ವ್ಯಾಖ್ಯಾನಿಸುವುದು ಕಷ್ಟ. ಇದು ನಮ್ಮ ಟೇಸ್ಟ್ ಬಡ್ಸ್ಗಳಲ್ಲಿ ಯಾವುದೇ ಸಾಮಾನ್ಯ ತಾಣಗಳನ್ನು ಪ್ರಚೋದಿಸುವುದಿಲ್ಲ, ಆದರೂ ಇದು ನಮ್ಮ ಮಿದುಳಿನ ಆನಂದ ಕೇಂದ್ರವನ್ನು ಬೆಳಗಿಸುವ ಭಾವನೆಯನ್ನು ನೀಡುತ್ತದೆ. “ಇದು ಮೆತ್ತನೆಯ ಚಿಪ್ಸ್ಗಳನ್ನು ಗರಿಗರಿಯಾಗಿಸುತ್ತದೆ, ಗಟ್ಟಿಯಾದ ಬ್ರೆಡ್ಡನ್ನು ರೇಶ್ಮೆಯಂತೆ ಮೃದುವಾಗಿಸುತ್ತದೆ, ಮಾಂಸಹಾರವನ್ನು ಖಾರಯುಕ್ತವಾಗಿಸಿ ರುಚಿಗೊಳಿಸುತ್ತದೆ.”
ಕೊಬ್ಬು ಆಹಾರದ ರುಚಿ, ವಿನ್ಯಾಸ ಮತ್ತು ಬಣ್ಣವನ್ನು ಸುಧಾರಿಸುವುದಲ್ಲದೆ, ಇದು ಆಹಾರದ ಜೀವಿತಾವಧಿಯನ್ನು ವಿಸ್ತರಿಸುತ್ತದೆ ಮತ್ತು ತುಲನಾತ್ಮಕವಾಗಿ ಅಗ್ಗವಾಗಿದೆ, ಇದರಿಂದಾಗಿ ತಯಾರಕರು ಬಹಳಷ್ಟು ಹಣವನ್ನು ಉಳಿಸುತ್ತಾರೆ. ಕೊಬ್ಬಿನ ದೊಡ್ಡ ಅಪಾಯವೆಂದರೆ ಅದರಲ್ಲಿ ಸಕ್ಕರೆಯ ಎರಡು ಪಟ್ಟು ಕ್ಯಾಲೊರಿ ಇದ್ದರೂ ಮೆದುಳು ಅದನ್ನು ಸ್ನೇಹಿತನಾಗಿ ನೋಡುತ್ತದೆ ಮತ್ತು ಸಕ್ಕರೆಯ ವಿಷಯದಲ್ಲಿ ಮಾಡುವಂತೆ ‘ಸಾಕು’ ಎಂದು ಕಿರುಚುವುದಿಲ್ಲ.
ಮಾಸ್ ಸಕ್ಕರೆ ಮತ್ತು ಕೊಬ್ಬನ್ನು ಎರಡು ವಿಭಿನ್ನ ಔಷಧಿಗಳಿಗೆ ಹೋಲಿಸುತ್ತಾರೆ. ಒಂದು, ಸಕ್ಕರೆ, ಇದು ನಮ್ಮ ಮಿದುಳಿಗೆ ಹೆಚ್ಚಿನ ವೇಗದ, ಹರಿತವಲ್ಲದ ಆಕ್ರಮಣವನ್ನು ನೀಡುತ್ತದೆ. ಮತ್ತು ಇನ್ನೊಂದು, ಕೊಬ್ಬು, ಹೆಚ್ಚು ಕಪಟಿ, ನಿದ್ದೆಕಾರಕ, ಮೆತ್ತನೆ ಕೆಲಸ ಮಾಡುವ ಇದರ ಪರಿಣಾಮಗಳು ಅಷ್ಟೇ ಶಕ್ತಿಯುತವಾಗಿರುತ್ತವೆ, ಆದರೆ ಕಡಿಮೆ ಪ್ರಕಟ ರೂಪದಲ್ಲಿರುತ್ತದೆ.
2010ರಲ್ಲಿ, ಯುಎಸ್ಡಿಎ ವರದಿಯು ಸ್ಯಾಚುರೇಟೆಡ್ ಕೊಬ್ಬು ಹೆಚ್ಚಿನ ಕೊಲೆಸ್ಟ್ರಾಲ್ಗೆ ಕಾರಣವಾಗಿ ಪಾರ್ಶ್ವವಾಯು ಮತ್ತು ಹೃದಯಾಘಾತಕ್ಕೆ ಕಾರಣವಾಗುತ್ತದೆಂದು ಹೇಳಿದೆ. ಮಾಂಸ ಮತ್ತು ಚೀಸ್ ಅತ್ಯಂತ ಕೆಟ್ಟ ಅಪರಾಧಿಗಳಾಗಿದ್ದು, ಸಂಸ್ಕರಿಸಿದ ಆಹಾರ ಉದ್ಯಮದಲ್ಲಿ ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬು ಹೊಂದಿವೆ. ಟೈಪ್ 2 ಡಯಾಬಿಟಿಸ್ ಅತಿರೇಕದ ಹೆಚ್ಚಳಕ್ಕೆ ಸ್ಯಾಚುರೇಟೆಡ್ ಕೊಬ್ಬು ಕಾರಣ ಎಂದು ವರದಿ ಹೇಳಿದೆ. ಬಳಕೆ ಮಾಹಿತಿಯು ಮಕ್ಕಳಲ್ಲಿ ತೀವ್ರವಾಗಿ ಹೆಚ್ಚಿನ ಸ್ಯಾಚುರೇಟೆಡ್ ಕೊಬ್ಬಿನ ಮಟ್ಟವನ್ನು ತೋರಿಸಿದೆ, 1-3 ವರ್ಷ ವಯಸ್ಸಿನ ಮಕ್ಕಳಲ್ಲಿ ಹೆಚ್ಚು ಸೇವಿಸುತ್ತಾರೆನ್ನಲಾಗಗಿದೆ.
ಈ ವರದಿಯನ್ನು ಮುಚ್ಚಿ ಹಾಕಿರುವುದು ಮಾಂಸ ಮತ್ತು ಡೈರಿ ಉದ್ಯಮದ ಲಾಬಿ ಶಕ್ತಿಯ ಕುರಿತು ಹೆಚ್ಚು ಹೇಳುತ್ತದೆ.
ಭಾಗ 3 ಉಪ್ಪನ್ನು ಕುರಿತು ವಿವರಿಸುತ್ತದೆ
ಉಪ್ಪು ಎನ್ನುವ ಮಾನವ ನಿರ್ಮಿತ ಹಂಬಲ
ಉಪ್ಪಿನಲ್ಲಿರುವ ರಾಸಾಯನಿಕ ಅಂಶಗಳಲ್ಲಿ ಒಂದಾದ ಸೋಡಿಯಂ ಸಣ್ಣ ಪ್ರಮಾಣದಲ್ಲಿ ದೇಹಕ್ಕೆ ಅತ್ಯಗತ್ಯ, ಆದರೆ ದೊಡ್ಡ ಪ್ರಮಾಣದಲ್ಲಿ ಸೇವಿಸುವುದರಿಂದ ದೇಹದ ಅಂಗಾಂಶಗಳಿಂದ ದ್ರವಗಳನ್ನು ರಕ್ತಕ್ಕೆ ಎಳೆದು ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಹೃದಯವನ್ನು ಹೆಚ್ಚು ಬಲವಾಗಿ ರಕ್ತ ಪಂಪ್ ಮಾಡಬೇಕಾದ ಅನಿವಾರ್ಯತೆಗೆ ದೂಡುತ್ತದೆ. ಫಲಿತಾಂಶ: ಅಧಿಕ ರಕ್ತದೊತ್ತಡ, ಅಥವಾ ಹೈಪರ್ಟೆನ್ಷನ್.
ಆಹಾರ ಸಂಸ್ಕರಣೆಯಲ್ಲಿ ಸಹಾಯ ಮಾಡಲು, ಸಾಮಾಗ್ರಿಗಳನ್ನು ಉಳಿಸಲು, ಆಹಾರದ ಕ್ಷೀಣಿಸುವಿಕೆಯನ್ನು ಮರೆಮಾಚಲು ಮತ್ತು ಆಹಾರವನ್ನು ಸಂರಕ್ಷಿಸಲು ಉಪ್ಪನ್ನು ಸೇರಿಸಲಾಗುತ್ತದೆ, ಒಂದು ಡಜನ್ ಸೋಡಿಯಂ ಆಧಾರಿತ ಸಂಯುಕ್ತಗಳ ಮೂಲಕ ಉಪ್ಪನ್ನು ಜನರ ದೇಹಕ್ಕೆ ಪಂಪ್ ಮಾಡಲಾಗುತ್ತದೆ.
ಚಿಪ್ಸ್ ಮಿದುವಾದಾಗ… ಯಾರಿಂದಲೂ ಕೇವಲ ಒಂದನ್ನು ಕೂಡ ತಿನ್ನಲು ಸಾಧ್ಯವಿಲ್ಲ
“ಸಂಸ್ಕರಿಸಿದ ಆಹಾರಗಳ ಕರಾಳ ಭಾಗವನ್ನು ಅತಿಕ್ರಮಿಸುವ” ಬಲದಿಂದಾಗಿ ಉಪ್ಪು ಉದ್ಯಮಕ್ಕೆ ನಿರ್ಣಾಯಕ ವಸ್ತುವಾಗಿದೆ. ಇದರರ್ಥ ಕೆಟ್ಟ ರುಚಿಯ ಸಂರಕ್ಷಕಗಳನ್ನು ಮರೆಮಾಚುವುದು ಮತ್ತು ಆಹಾರಗಳು ಕ್ಷೀಣಿಸದಂತೆ ಮಾಡುವುದು. ಜೊತೆಗೆ, ಸಕ್ಕರೆ ಮತ್ತು ಕೊಬ್ಬಿನಂತೆ, ಉಪ್ಪು ಪ್ಯಾಕೇಜ್ ಮಾಡಿದ ಆಹಾರದ ರುಚಿ ಮತ್ತು ವಿನ್ಯಾಸವನ್ನು ಸುಧಾರಿಸುತ್ತದೆ.”ಸಂಸ್ಕರಿಸಿದ ಆಹಾರಗಳ ಕರಾಳ ಭಾಗವನ್ನು ಅತಿಕ್ರಮಿಸುವ” ಬಲದಿಂದಾಗಿ ಉಪ್ಪು ಉದ್ಯಮಕ್ಕೆ ನಿರ್ಣಾಯಕ ವಸ್ತುವಾಗಿದೆ. ಇದರರ್ಥ ಕೆಟ್ಟ ರುಚಿಯ ಸಂರಕ್ಷಕಗಳನ್ನು ಮರೆಮಾಚುವುದು ಮತ್ತು ಆಹಾರಗಳು ಕ್ಷೀಣಿಸದಂತೆ ಮಾಡುವುದು. ಜೊತೆಗೆ, ಸಕ್ಕರೆ ಮತ್ತು ಕೊಬ್ಬಿನಂತೆ, ಉಪ್ಪು ಪ್ಯಾಕೇಜ್ ಮಾಡಿದ ಆಹಾರದ ರುಚಿ ಮತ್ತು ವಿನ್ಯಾಸವನ್ನು ಸುಧಾರಿಸುತ್ತದೆ.
ಉಪ್ಪಿನ ಕುರಿತ ಆಸಕ್ತಿದಾಯಕ ವಿಷಯವೆಂದರೆ, ಸೇವನೆಯನ್ನು ಕಡಿತಗೊಳಿಸುವುದು ಸುಲಭ. ವಸ್ತುಗಳು ರುಚಿಯನ್ನು ಕಳೆದುಕೊಂಡಾಗ ಸ್ವಲ್ಪ ಸಮಯದ ಹೊರತಾಗಿ, ರುಚಿಗೆ ಒಗ್ಗಿಕೊಂಡಿರುವ ಟೇಸ್ಟ್ಬಡ್ಸ್ಗಳು ಸಂವೇದನೆಯನ್ನು ಮರಳಿ ಪಡೆಯುತ್ತವೆ, ಆದ್ದರಿಂದ ಅದರ ಸಂತೋಷಗಳನ್ನು ಅನುಭವಿಸಲು ಅವುಗಳಿ ಕಡಿಮೆ ಉಪ್ಪಿನ ಅಗತ್ಯವಿರುತ್ತದೆ.
ಉಪ್ಪು, ಸಕ್ಕರೆ ಮತ್ತು ಕೊಬ್ಬು ಇಲ್ಲವಾಗುವುದರ ಸರಳ ಅರ್ಥವೆಂದರೆ ಮಾರಾಟವಿಲ್ಲದಿರುವುದು.
ಈ ಬಹುರಾಷ್ಟ್ರೀಯ ಆಹಾರ ಕಂಪನಿಗಳ ಅನೇಕ ಹಿರಿಯ ಉದ್ಯೋಗಿಗಳು ಆರೋಗ್ಯಕ್ಕೆ ಸ್ಪಷ್ಟವಾಗಿ ಹಾನಿಕಾರಕವಾದಂತಹ ಉತ್ಪನ್ನಗಳನ್ನು ಮಾರಾಟ ಮಾಡುವ ಬಗ್ಗೆ ತಪ್ಪಿತಸ್ಥ ಭಾವನೆ ಹೊಂದಿದ್ದರು. ಅನೇಕರು ತಮ್ಮದೇ ಆದ ಉತ್ಪನ್ನಗಳನ್ನು ಬಳಸುತ್ತಿರಲಿಲ್ಲ. ಆದರೂ ಅವರು ಆರೋಗ್ಯ ಸಂಬಂಧಿ ಎಚ್ಚರಿಕೆಗಳನ್ನು ನಿಗ್ರಹಿಸುವುದನ್ನು ಮುಂದುವರೆಸುತ್ತಾರೆ ಮತ್ತು ಅವುಗಳನ್ನು ಮಾರಾಟ ಮಾಡುವ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಏಕೆ? ಏಕೆಂದರೆ ಆಹಾರ ಉದ್ಯಮವು ಗ್ರಾಹಕರಿಗಿಂತ ಸಂಸ್ಕರಿಸಿದ ಆಹಾರದಲ್ಲಿನ ಈ 3 ಸ್ತಂಭಗಳಿಗೆ ಹೆಚ್ಚು ವ್ಯಸನಿಯಾಗಿದೆ. ನೀವು ನೋಡಿ, ಉಪ್ಪು, ಸಕ್ಕರೆ, ಕೊಬ್ಬು ಇಲ್ಲದಿದ್ದರೆ ಉದ್ಯಮವು ಅಸ್ತಿತ್ವದಲ್ಲಿರುವುದಿಲ್ಲ.
ಈಗೇನು ಮಾಡುವುದು?
ತಿನ್ನಲು ಸಿದ್ಧವಾಗಿರುವ ಆಹಾರಗಳ ಸಂಪೂರ್ಣ ಅನುಕೂಲತೆ, ದೊಡ್ಡ ಪ್ಯಾಕ್ ಗಾತ್ರಗಳ ಕಪಟ ಮಾರುಕಟ್ಟೆ ಮತ್ತು ಉದ್ದೇಶಪೂರ್ವಕವಾಗಿ ತಪ್ಪುದಾರಿಗೆಳೆಯುವ ಲೇಬಲ್ಗಳನ್ನು ಮೀರಿ ಅದರ ಕುರಿತು ತಿಳಿದುಕೊಳ್ಳಿ. ಆಹಾರ ಲೇಬಲ್ನ ಹಿಂದೆ ನಿಜವಾಗಿ ಏನಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ಬುದ್ಧಿವಂತಿಕೆಯ ಆಯ್ಕೆ ಮಾಡಲು ಇದು ಸಮಯ.