ಕೋವಿಡ್-19 ಕುರಿತ ಮ್ಯಾಕೆಂಜಿಯ ಪುಸ್ತಕವು ಮೂರು ಪ್ರಮುಖ ಅಂಶಗಳಲ್ಲಿ ನಮ್ಮ ಕಣ್ಣು ತೆರೆಸುವಂತಿದೆ. ಮೊದಲನೆಯದಾಗಿ, ಇದು ಚೀನಾದ ವುಹಾನ್ನಲ್ಲಿನ ಕರೋನವೈರಸ್ನ ಮೂಲದ ಬಗ್ಗೆ ವಿವರಿಸುತ್ತದೆ.
ಆಕೆ ಸದ್ಯದ ಸಾಂಕ್ರಾಮಿಕ ರೋಗವನ್ನು ಐತಿಹಾಸಿಕ ಸನ್ನಿವೇಶದ ಮೂಲಕ ನೋಡುತ್ತಾರೆ. ಆಧುನಿಕ ವ್ಯಾಕ್ಸಿನ್ ವಿರೋಧಿಗಳನ್ನು ಮೇಲ್ವರ್ಗದ ತಲೆಮಾರು ಎಂದು ತಳ್ಳಿ ಹಾಕುತ್ತಾರೆ. ನಂತರ ವ್ಯಾಕ್ಸಿನ್, ಆಂಟಿವೈರಲ್ ಔಷಧಿಗಳು ಮತ್ತು ಆಂಟಿಬಯೋಟಿಕ್ಸ್ ತಯಾರಿಕೆಯಲ್ಲಿ ಸರಕಾರ ಮತ್ತು ಮಾರುಕಟ್ಟೆಯ ಅಸಮರ್ಥತೆಯ ಬಗ್ಗೆ ಕಟುವಾಗಿ ಟೀಕಿಸುತ್ತಾರೆ.
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವ್ಯವಸ್ಥೆಗಳ ಬಗ್ಗೆ ತಮಗಿರುವ ಜ್ಞಾನವನ್ನು ವಿಜ್ಞಾನ ಪತ್ರಕರ್ತೆಯಾದ ಮ್ಯಾಕೆಂಜಿ, ಆರಂಭದ ದಿನಗಳಲ್ಲಿ ಚೀನಾದಲ್ಲಿ ಏನೆಲ್ಲಾ ಸಂಭವಿಸಿದವು ಎಂಬುದರ ಬಗ್ಗೆ ಆಳವಾದ ಒಳನೋಟವನ್ನು ನೀಡುತ್ತಾರೆ. ಆ ಮೂಲಕ ಕೋವಿಡ್ 19 ಸುತ್ತ ಹುಟ್ಟಿಕೊಂಡಿರುವ ಕಾನ್ಸ್ಪಿರಸಿ ಥಿಯರಿಗಳನ್ನು ಸಕಾರಣದೊಂದಿಗೆ ತಳ್ಳಿ ಹಾಕುತ್ತಾರೆ.
ಸಾಂಕ್ರಾಮಿಕ ರೋಗವನ್ನು ಹೇಗೆ ನಿಯಂತ್ರಿಸುವುದು ಮತ್ತು ತಪ್ಪಿಸುವುದು ಎಂಬುದರ ಕುರಿತು WHO ಎಚ್ಚರಿಕೆ ನೀಡುತ್ತಿರುವ ಸಮಯದಲ್ಲೇ ಈ ಪುಸ್ತಕವು ಹೊರ ಬರುತ್ತದೆ. ಈ ಪುಸ್ತಕವನ್ನು ಬಹುಶಃ ಕೋವಿಡ್ 19ರ ಮೊದಲ ಮರಣೋತ್ತರ ಪರೀಕ್ಷೆ ಎಂದೂ ಕರೆಯಬಹುದು. ವೈರಸ್ ಹೇಗೆ ಹರಡುತ್ತದೆ, ನಮ್ಮ ವೈಫಲ್ಯಗಳು ಏನೆಲ್ಲ ಮತ್ತು ಭವಿಷ್ಯದ ಪುನರಾವರ್ತನೆಗಳನ್ನು ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಗಳನ್ನು ನೀಡುವ ಈ ಪುಸ್ತಕವು ನಮ್ಮ ಕಣ್ಣು ತೆರೆಸುವಂತಹದ್ದು. ಸದ್ಯ ಸಾಂಕ್ರಾಮಿಕ ರೋಗದ ಸುತ್ತ ಹಬ್ಬಿಕೊಂಡಿರುವ ಹಲವು ವದಂತಿಗಳನ್ನು ತಳ್ಳಿ ಹಾಕುತ್ತದೆ. ಕಳೆದ ಮೂರು ದಶಕಗಳಲ್ಲಿ ಸಾರ್ಸ್, ಎಬೋಲಾ, ರೇಬೀಸ್ ಮತ್ತು ಏಡ್ಸ್ ರೋಗಗಳ ವಿಷಯದಲ್ಲಿ ಮುಂಚೂಣಿಯಲ್ಲಿರುವ ಮ್ಯಾಕೆಂಜಿ ತನ್ನ ಅನುಭವವನ್ನು ಇಲ್ಲಿ ಮುಂದಿನ ದಾರಿಗಾಗಿ ಸಮರ್ಥವಾಗಿ ಬಳಸಿಕೊಳ್ಳುತ್ತಾರೆ.