ಟೋಸ್ಟ್ ಟಾಪರ್ಸ್
ಪಾಕಶಾಸ್ತ್ರ ಬರಹಗಾರ ನಿಗೆಲ್ ಸ್ಲೇಟರ್ ಒಮ್ಮೆ ಹೇಳಿದ ಪ್ರಖ್ಯಾತ ಮಾತೊಂದು ಹೀಗಿದೆ: ‘ನಿಮಗಾಗಿ ಟೋಸ್ಟ್ ಮಾಡುವ ವ್ಯಕ್ತಿಯನ್ನು ನಿಮ್ಮಿಂದ ಪ್ರೀತಿ ಮಾಡದೇ ಇರಲು ಸಾಧ್ಯವೇ ಇಲ್ಲ.’ ಹೌದು. ಇದು ಸತ್ಯ. ಟೋಸ್ಟುಗಳನ್ನು ಬೇಡವೆಂದು ಹೇಳಲು ಬಹಳ ಕಷ್ಟ. ಜೊತೆಗೆ ಇವು ಮನಮೋಹಕ, ರುಚಿಕರವಾದ ಟಾಪಿಂಗುಗಳ ಅನಂತವಾದ ಕ್ಯಾನ್ವಾಸ್ ಕೂಡ ಹೌದು.
ಟೋಸ್ಟುಗಳ ಅತ್ಯಂತ ಪ್ರಮುಖ ಸಂಗತಿಯೆಂದರೆ ಇದು ಎಲ್ಲ ಸಮಯವೂ ಒದಗಿ ಬರುತ್ತದೆ. ಅದು 2 AM ಆದರೂ ಸರಿ 2 PM ಆದರೂ ಸರಿ, ಒಂದು ತುಂಡು ಟೋಸ್ಟ್ ನಿಮ್ಮನ್ನು ತಟ್ಟಿ ಎಬ್ಬಿಸದೇ ಇರುವುದಿಲ್ಲ. ಅದು ಮಧ್ಯರಾತ್ರಿಯ ಹಸಿವಾದರೂ ಸರಿ, ಏನು ತಿನ್ನಬೇಕು ಅಂತ ತೋಚದೆ ಇರುವ ಹಸಿವಾದರೂ ಸರಿ, ಟೋಸ್ಟ್ ಮಾತ್ರ ನಿಮಗೆ ನೆಚ್ಚಿನ ಜೊತೆಗಾರನಾಗುತ್ತದೆ. ಟೋಸ್ಟನ್ನು ಬೆಳಗಿನ ಉಪಹಾರಕ್ಕೆ, ಹತ್ತು ಗಂಟೆಯ ತಿಂಡಿಗೆ ಅಥವಾ ರಾತ್ರಿಯ ಊಟಕ್ಕೆ ಸೇರಿಸಬಹುದು. ಅದು ನಿಮಗೆ ಬಿಟ್ಟದ್ದು.
ಬನ್ನಿ, ಮನೆಯಲ್ಲೇ ಕಡಿಮೆ ಮತ್ತು ಸರಳ ಸಾಮಗ್ರಿಗಳನ್ನು ಬಳಸಿ ಮಾಡಬಹುದಾದ ಕೆಲವು ಅಭೂತಪೂರ್ವ ಟೋಸ್ಟ್ ರೆಸಿಪಿಗಳನ್ನು ನೋಡೋಣ. ಹಳೆಯ ಇಷ್ಟ ಪದಾರ್ಥಗಳನ್ನು ಅಥವಾ ಕೈಗೆ ಸಿಗುವ ಏನನ್ನಾದರೂ ಸೇರಿಸಿ ಟಾಪ್ ಮಾಡಿ. ಅಥವಾ ನಿಮ್ಮ ಸಂಗಾತಿ ಮತ್ತು ಮಕ್ಕಳನ್ನು ಸೇರಿಸಿ ಒಂದು ಟೋಸ್ಟ್ ಸ್ಪರ್ಧೆ ಏರ್ಪಡಿಸಿ ನೀವು ತೀರ್ಪುಗಾರರಾಗಿ ಕೂತು ಆನಂದಿಸಿ.
ಈಸಿ ಚೀಸಿ: ಇದಕ್ಕೆ ಪಾಕವಿಧಾನ ಅಂತ ಏನು ಬೇಕಾಗಿಲ್ಲ. ಮೊಸರೆಲ್ಲ ಅಥವಾ ಬೇರೆ ಯಾವುದೇ ಚೀಸ್ ಅನ್ನು ಸಾಕಷ್ಟು ಹಚ್ಚಿರಿ, ಅದರ ಮೇಲೆ ಹೆಚ್ಚಿದ ಹಸಿ ಮೆಣಸಿನಕಾಯಿ ಹರಡಿ ಗ್ರಿಲ್ ಮಾಡಿರಿ.
ಚಟಪಟಾ ಕಡಲೆ: ಇದು ಬೆರಳು ಚೀಪುವಷ್ಟು ರುಚಿಕರವಾಗಿರುತ್ತದೆ! ಬಿಳಿ ಕಡಲೆಯನ್ನು ಬೇಯಿಸಿ. ಇದನ್ನು ಚಾಟ್ ಮಸಾಲಾ ಮತ್ತು ಗರಂ ಮಸಾಲಾ ಸೇರಿಸಿ ಆಲಿವ್ ಎಣ್ಣೆಯಲ್ಲಿ ಹುರಿಯಿರಿ. ಇದನ್ನು ಹರಡಲು ಬಿಳಿ ಬೆಣ್ಣೆಯನ್ನು ಟೋಸ್ಟಿನ ಮೇಲೆ ಹಚ್ಚಿರಿ. ಅದರ ಮೇಲೆ ಕಡಲೆಯನ್ನು ಹರಡಿ. ರುಚಿಕರವಾಗಿಸಲು ಈರುಳ್ಳಿ ದಂಟು ಮತ್ತು/ಅಥವಾ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
PS: ಹಳೆಯ ಬಾಕಿ ಉಳಿದ ಕಡಲೆಯನ್ನು ಕೂಡ ಇಲ್ಲಿ ಬಳಸಬಹುದು.
ಕೋರ್ನ್-ಯು-ಕೋಪಿಯಾ: ಪಾಲಕ್ ಮತ್ತು ಜೋಳದ ವಿಷಯದಲ್ಲಿ ನಿಮಗೆ ತಪ್ಪಾಗಲು ಸಾಧ್ಯವೇ ಇಲ್ಲ. ಎಣ್ಣೆಯನ್ನು ಹೊಗೆಯಾಡುವ ತನಕ ಕಾಯಿಸಿ. ಅದಕ್ಕೆ ಜೋಳ ಮತ್ತು ಹೆಚ್ಚಿದ ಪಾಲಕ್ ಸೊಪ್ಪನ್ನು ಸೇರಿಸಿ. ಟೋಸ್ಟಿಗೆ ಹರಡುವ ಮೊದಲು ತಣ್ಣಗಾಗಿಸಿ. ಸ್ವಲ್ಪ ಚೀಸ್ ತುರಿದು ಸೇರಿಸಿಕೊಳ್ಳಿ.
ಆಯ್ಕೆ: ಪಾಲಕ್ ಬದಲಿಗೆ ಈರುಳ್ಳಿ ದಂಟು ಬಳಸಿ ನೋಡಿ.
ಬಾ ಬಾ ಬಾಳೆಹಣ್ಣು: ಮಧ್ಯಾಹ್ನದ ಸಮಯದಲ್ಲಿ ಸಿಹಿ ಬೇಕೆಂದು ಅತಿಯಾಗಿ ಬಯಕೆಯಾದಾಗ ಬಾಳೆಹಣ್ಣು ಮತ್ತು ಶೇಂಗಾ ಬೆಣ್ಣೆ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಸ್ವಲ್ಪ ಶೇಂಗಾ ಬೆಣ್ಣೆಯನ್ನು ನಿಮ್ಮ ಟೋಸ್ಟಿನ ಮೇಲೆ ಹರಡಿಕೊಳ್ಳಿರಿ. ಓರೆಯಾಗಿ ತುಂಡು ಮಡಿದ ಬಾಳೆಹಣ್ಣುಗಳನ್ನು ಅದರ ಮೇಲೆ ಇರಿಸಿ. ಸ್ವಲ್ಪ ಜೇನುತುಪ್ಪವನ್ನು ಸಿಂಪಡಿಸಿ. ಅಷ್ಟೇ.
ದಾಲ್ಚಿನ್ನಿ ಮತ್ತು ಜೇನು: ಸಿಹಿ ಮತ್ತು ಉಪ್ಪು ಬೆರೆತ ರುಚಿಯನ್ನು ಯಾರು ತಾನೇ ಉಷ್ಟಪಡುವುದಿಲ್ಲ ಹೇಳಿ. ಈ ಅದ್ಭುತವಾದ ಟೋಸ್ಟಿಗೆ ಸ್ವಲ್ಪ ಮಲ್ಟಿ ಫ್ಲೋರಲ್ ಜೇನು ಸೇರಿಸಿ. ಅದರ ಮೇಲೆ ಚಿಟಿಕೆಯಷ್ಟು ಸಾವಯವ ದಾಲ್ಚಿನ್ನಿ ಪುಡಿಯನ್ನು ಸಿಂಪಡಿಸಿ. ಹೆಚ್ಚಿನ ಕ್ರಂಚ್ ಬೇಕೆಂದರೆ ಹೆಚ್ಚಿದ ಬಾದಾಮಿ ಸೇರಿಸಿ.
ಸ್ನಾಪ್ಪಿ ಆಪಲ್: ದಿನವನ್ನು ಆರಂಭಿಸಲು ನಿಮ್ಮ ನೆಚ್ಚಿನ ಹಣ್ಣುಗಳಿಗಿಂತ ಮಿಗಿಲಾದದ್ದು ಬೇರೆ ಇರಲಿಕ್ಕಿಲ್ಲ. ಜೊತೆಗೆ ಹೆಚ್ಚಿನ ಆರೋಗ್ಯಕ್ಕಾಗಿ ಬಾದಾಮಿ ಬೆಣ್ಣೆಯನ್ನೂ ಸೇರಿಸಿ. ಗ್ರಾನಿ ಸ್ಮಿತ್ ಆಪಲನ್ನು ತುಂಡರಿಸಿ ಟೋಸ್ಟಿನ ಮೇಲಿರಿಸಿ. ದಾಲ್ಚಿನ್ನಿ ಪುಡಿ ಸಿಂಪಡಿಸಿದರೆ ಕೆಲಸ ಮುಗಿಯಿತು.
ದಂ ದಂ ಆಲೂ: ಇಲ್ಲಿ ಟೋಸ್ಟ್ ಭಾರತೀಯ ಆಲೂ ದಂ ಜೊತೆಗೆ ಸೇರುತ್ತದೆ. ಸಾಕಷ್ಟು ಪುದೀನಾ ಚಟ್ನಿ ಮತ್ತು ಆಲೂ ದಂ (ಬಾಕಿಯದ್ದಾದರೂ ಸರಿ) ಹರಡಿ. ನಿಮ್ಮ ಟೋಸ್ಟಿಗೆ ಇದೊಂದು ತಾಜಾ ಮತ್ತು ರಸಕರವಾದ ಟ್ವಿಸ್ಟ್. ಸಬ್ಬಸಿಗೆಯಿಂದ ಅಲಂಕರಿಸಿದರೆ ರುಚಿಕರವಾದ ತಿಂಡಿ ಅಥವಾ ಒಂದು ಹೊತ್ತಿನ ಊಟವೂ ಆಗಬಹುದು.
ಸರಳ ಸಲಾಡ್: ಇಗೋ ಇಲ್ಲಿದೆ ನಿಮಗಾಗಿ ತಾಜಾ ರುಚಿ ಜೋಡಿಗಳು. ಕ್ಯಾಬೇಜ್, ಈರುಳ್ಳಿ, ಕ್ಯಾಪ್ಸಿಕಂ, ಟೊಮೇಟೊ, ಆಪಲ್ ಇವುಗಳನ್ನು ಹೆಚ್ಚಿಕೊಳ್ಳಿರಿ. ಸ್ವಲ್ಪ ಲಿಂಬೆರಸವನ್ನು ಸಿಂಪಡಿಸಿ. ಥೈಮ್ ಇದ್ದರೆ ಅದನ್ನೂ ಸೇರಿಸಿ. ತುಪ್ಪದಲ್ಲಿ ಹುರಿದ ಓವನ್ ಆರ್ಗ್ ಬ್ರೆಡ್ಡಿನಲ್ಲಿ ಇದನ್ನು ಸೇರಿಸಿದರೆ ನಿಮ್ಮ ಕೆಲಸ ಮುಗಿಯಿತು.
ಪುದೀನಾ ಮಾಯೆ: ಚೂರೇ ಚೂರು ಪುದೀನಾ ಚಟ್ನಿ ಇದ್ದರೆ ಸಾಕು, ಬಹಳಷ್ಟನ್ನು ಮಾಡಬಹುದು. ಟೋಸ್ಟಿನ ಮೇಲೆ ಸಾಕಷ್ಟು ಚಟ್ನಿಯನ್ನು ಹರಡಿರಿ. ಅದರ ಮೇಲೆ ನಿಮಗೆ ಇಷ್ಟವಾದ ಏನನ್ನಾದರೂ ಸೇರಿಸಿ. ಕೆಲವು ಸಲಹೆಗಳು:
- ಪೈನಾಪಲ್ + ಚಿಲ್ಲಿ ಫ್ಲೇಕ್ಸ್
- ಫೆಲಾಫಿಲ್ + ಕೆಂಪು ಈರುಳ್ಳಿ
- ಗ್ರಿಲ್ ಮಾಡಿದ ಪನೀರ್ + ಈರುಳ್ಳಿ
ಮಸ್ತ್ ಮಶ್ರೂಮ್: ಈರುಳ್ಳಿ ಮತ್ತು ಟೊಮೆಟೊವನ್ನು ಒಂದು ಪಾತ್ರೆಯಲ್ಲಿ ಹುರಿದುಕೊಳ್ಳಿ. ಅದಕ್ಕೆ ಅಣಬೆ ಸೇರಿಸಿ 5 ರಿಂದ 7 ನಿಮಿಷಗಳವರೆಗೆ ಬೇಯಿಸಿ. ಕಾಳುಮೆಣಸು ಮತ್ತು ಸೋಯಾ ಸಾಸ್ ಸೇರಿಸಿ. ಹೆಚ್ಚಿದ ಕ್ಯಾಪ್ಸಿಕಂ ಬಳಸಿ ಅಲಂಕರಿಸಿ.
ನಿಮ್ಮ ರೆಸಿಪಿ ಐಡಿಯಾಗಳಿಗಾಗಿ ನಾವೂ ಕಾಯುತ್ತಿದ್ದೇವೆ. ನೀವು ಬರೆಯಿರಿ. ನಿಮ್ಮ ಸಲಹೆಗಳನ್ನು ಇನ್ನೊಂದು ಬ್ಲಾಗಲ್ಲಿ ಪ್ರಕಟಿಸುತ್ತೇವೆ.