(ಈ ಲೇಖನ ಬರೆಯುವಾಗ ಯಾವುದೇ ಪ್ರಾಣಿಗಳನ್ನು ಶೋಷಣೆಗೆ ಒಳಪಡಿಸಿಲ್ಲ)
ಸಸ್ಯಾಹಾರದ ಕುರಿತಾದ ಚರ್ಚೆಗಳು ಜೋರಾಗಿ ಮತ್ತು ಸ್ಪಷ್ಟವಾಗಿ ಕೇಳಿಬರುತ್ತಿದೆ, ನಿಜಕ್ಕೂ ಇದನ್ನು ನಿರ್ಲಕ್ಷಿಸುವುದು ನನಗೆ ಸ್ವಲ್ಪ ಕಷ್ಟ. ವಿಶೇಷವಾಗಿ ನಾನು ಕೆಲಸ ಮಾಡುವ ಸ್ಥಳದಲ್ಲಿ ಸಾವಯವ ಉತ್ಪನ್ನಗಳ ಅಭಿಮಾನಿಗಳಿಂದ ತುಂಬಿ ಹೋಗಿದೆ. ಮತ್ತು ಆರೋಗ್ಯ, ಸುಸ್ಥಿರತೆ ಮತ್ತು ಮುಂತಾದವುಗಳ ಬಗ್ಗೆ ಆಸಕ್ತಿ ಹೊಂದಿದೆ.
ಇತ್ತೀಚೆಗೆ ನನ್ನ ಸಸ್ಯಾಹಾರಿ ಗೆಳೆಯರೊಡನೆ ಊಟಕ್ಕೆಂದು ಹೋಗಿದ್ದಾಗ ಇಷ್ಟವಿಲ್ಲದಿದ್ದರೂ ನಾರ್ವೇಜಿಯನ್ ಸಾಲ್ಮನ್ ಬದಲು ಡೈರಿ ಉತ್ಪನ್ನ, ಮಾಂಸಗಳಿಲ್ಲದ ಆಹಾರವನ್ನು ಆರ್ಡರ್ ಮಾಡಿದ್ದೆ. ಯಾಕೆಂದರೆ ನಾನು ನನ್ನ ಗೆಳೆಯರಿಗೆ ಸಸ್ಯಹಾರ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದೆ. ಮತ್ತು ನಾನು ಆ ಮಾತನ್ನು ಉಳಿಸಿಕೊಂಡಿದ್ದೆ, ಹೌದು! ನಾನು ಸಸ್ಯಾಹಾರವನ್ನು ಒಪ್ಪಿಕೊಂಡು ಹದಿನೈದು ನಿಮಿಷಗಳಾಗಿತ್ತು.
ತಮಾಷೆ ಪಕ್ಕಕ್ಕಿಟ್ಟು, ನಾನು ಡೈರಿ ಉತ್ಪನ್ನ ತ್ಯಜಿಸಲು ಯೋಚಿಸಿದಾಗ, ನನ್ನ ಮೊದಲ ಕಾಳಜಿ, ಆಸ್ಟಿಯೊಪೊರೋಸಿಸ್ ಭಯವಿರುವ ಯಾವುದೇ ಸಾಮಾನ್ಯ ವಯಸ್ಕನಂತೆ, ಕ್ಯಾಲ್ಸಿಯಂ ಹೇಗೆ ಪಡೆಯುವುದು ಎನ್ನುವುದಾಗಿತ್ತು. ಇದು ನನ್ನ ದೇಹದಲ್ಲಿ ಹೆಚ್ಚು ಹೇರಳವಾಗಿರುವ ಖನಿಜವಾಗಿದೆ ಮತ್ತು ಅದು ಹಾಗೆಯೇ ಇರಬೇಕೆಂದು ನಾನು ಬಯಸುತ್ತೇನೆ. ಹೌದು ನನ್ನ ಮೂಳೆಗಳು ಮತ್ತು ಹಲ್ಲುಗಳನ್ನು ಉಳಿಸಿಕೊಳ್ಳಲು ನಾನು ಬಯಸುತ್ತೇನೆ, ಧನ್ಯವಾದಗಳು.
ಹಾಗಾದರೆ ಹಾಲು, ಮೊಸರು ಮತ್ತು ಚೀಸ್ ಹೊರತುಪಡಿಸಿ ಯಾವ ಆಹಾರಗಳು ಕ್ಯಾಲ್ಸಿಯಂನಿಂದ ಸಮೃದ್ಧವಾಗಿವೆ? ಸಾಕಷ್ಟು ಇವೆ, ನಾನು ಅವುಗಳನ್ನು ಕಂಡುಹಿಡಿದಿದ್ದೇನೆ. ಇತರ ಅವಶ್ಯಕತೆಗಳು ಸಿಗುವ ಆಹಾರದಲ್ಲೇ ಇವು ಕೂಡ ಇವೆ ಅವುಗಳು ಇಲ್ಲಿವೆ:
ಕ್ಯಾಲ್ಸಿಯಂ ಭರಿತ ಆಹಾರ, ಸಸ್ಯಾಹಾರ
- ಸಿರಿಧಾನ್ಯ: ರಾಗಿ, ಊದಾ ಮತ್ತು ಅರ್ಕ
2. ಬೀಜ ಮತ್ತು ಕಾಯಿಗಳು : ಗಸಗಸೆ, ಎಳ್ಳು, ಕಾಮಕಸ್ತೂರಿ, ಹರಿವೆ, ಅಗಸೆ ಮತ್ತು ಬಾದಾಮಿ
3. ಗಾಢ ಹಸಿರು ಎಲೆಗಳು: ಪಾಲಕ, ನವಿಲುಕೋಸು, ಸಾಸಿವೆ, ಬೀಟ್ರೂಟ್, ಹರಿವೆ ಮತ್ತು ಬೊಕ್ ಚಾಯ್
4. ತರಕಾರಿಗಳು: ಬೆಂಡೆ, ಸ್ವಿಸ್ ಚಾರ್ಡ್, ಕೋಸುಗಡ್ಡೆ ಮತ್ತು ಹಾಗಲ
5. ಹಣ್ಣುಗಳು: ಕಿತ್ತಳೆ, ಟ್ಯಾಂಗರಿನ್, ಕಸ್ಟರ್ಡ್ ಆಪಲ್, ಪೇರಲ, ಕಿವಿ, ಮಲ್ಬೆರಿ ಮತ್ತು ಬ್ಲ್ಯಾಕ್ಬೆರಿಗಳಂತಹ ಹಣ್ಣುಗಳು, ಒಣಗಿದ ಅಂಜೂರದ ಹಣ್ಣುಗಳು, ಪಪ್ಪಾಯಿ ಮತ್ತು ಪ್ಯಾಶನ್ ಹಣ್ಣು
6. ಬೇಳೆಕಾಳುಗಳು: ಕಡಲೆ, ಅಲಸಂದೆ, ರಾಜ್ಮಾ , ಎಂಡಮಾಮೆ (ತಾಜಾ ಸೋಯಾ ಬೀನ್ಸ್)
7.ಟೋಫು ಮತ್ತು ಸೋಯಾ ಹಾಲು
ಕ್ಯಾಲ್ಸಿಯಂ ಪೂರಿತ ಆಹಾರಗಳು
ಈ ದಿನಗಳಲ್ಲಿ ಸಾಕಷ್ಟು ವ್ಯಾಪ್ತಿಯಲ್ಲಿ ದೊರೆಯುತ್ತಿದೆ, ಕ್ಯಾಲ್ಸಿಯಂನಿಂದ ಕೂಡಿದ ಆಹಾರಗಳಲ್ಲಿ ಕಿತ್ತಳೆ ರಸ, ಓಟ್ಸ್ ಮತ್ತು ಹಿಟ್ಟನ್ನು ನೀವು ಸೇರಿಸಿಕೊಳ್ಳಬಹುದು. ಸಹಜವಾಗಿ, ನೈಸರ್ಗಿಕವಾಗಿ ಸಿಗುವ ಪೋಷಕಾಂಶಗಳು ಉತ್ತಮವಾದವು.
ವಾಸ್ತವವಾಗಿ ನಿಮಗೆಷ್ಟು ಪ್ರಮಾಣದ ಕ್ಯಾಲ್ಸಿಯಂ ಅವಶ್ಯಕ?
ಸಣ್ಣ ಉತ್ತರವೆಂದರೆ ಡೈಲಿ ವ್ಯಾಲ್ಯೂ (ದೈನಂದಿನ ಅಗತ್ಯ) (ಡಿವಿ) 1300 ಮಿಗ್ರಾಂ. ಆದರೆ ನಾವು ಸೇವಿಸುವ ಆಹಾರದಿಂದ ಅದರಲ್ಲಿ ಎಷ್ಟನ್ನು ಹೀರಿಕೊಳ್ಳುತ್ತದೆ ಎಂದು ಅಂದಾಜು ಮಾಡಲು, ಇದನ್ನು ತಿಳಿದುಕೊಳ್ಳಿ:
- ಅಪಾರ ಪ್ರಮಾಣದ ಕ್ಯಾಲ್ಸಿಯಂ ಅನ್ನು ಸೇವಿಸುವುದರಿಂದ ನೀವು ಸೇವಿಸಿದ ಎಲ್ಲವನ್ನೂ ದೇಹ ಹೀರಿಕೊಳ್ಳುತ್ತದೆ ಎಂದರ್ಥವಲ್ಲ
- ದೇಹದಲ್ಲಿ ಕ್ಯಾಲ್ಸಿಯಂನ ಹೀರಿಕೊಳ್ಳುವಿಕೆಯು ವಯಸ್ಸಿನೊಂದಿಗೆ ಕಡಿಮೆಯಾಗುತ್ತದೆ, ಆದ್ದರಿಂದ ಮಕ್ಕಳು ಆಹಾರದಿಂದ 60% ಕ್ಯಾಲ್ಸಿಯಂ ಅನ್ನು ಹೀರಿಕೊಂಂಡರೆ ವಯಸ್ಕರು ಕೇವಲ 20% ಅನ್ನು ಹೀರಿಕೊಳ್ಳುತ್ತಾರೆ. ಕುತೂಹಲಕಾರಿಯಾಗಿ, ಗರ್ಭಿಣಿಯರು ಹೆಚ್ಚು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಬಲ್ಲರು.
- ನಿಮ್ಮ ಆಹಾರದಲ್ಲಿ ಸೋಡಿಯಂ, ಪ್ರೋಟೀನ್, ಆಲ್ಕೋಹಾಲ್, ಚಹಾ ಮತ್ತು ಕಾಫಿ ಅಧಿಕವಾಗಿದ್ದಲ್ಲಿ, ದೇಹ ಕ್ಯಾಲ್ಸಿಯಂ ಹೀರಿಕೊಳ್ಳುವ ಮತ್ತು ಉಳಿಸಿಕೊಳ್ಳುವ ಬದಲು ವಿಸರ್ಜಿಸುತ್ತದೆ.
- ಭಾರ ತಡೆದುಕೊಳ್ಳುವ ಲೋಡ್-ಬೇರಿಂಗ್ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹವು ಕ್ಯಾಲ್ಸಿಯಂ ಉತ್ಪಾದಿನೆಯನ್ನು ಪ್ರೋತ್ಸಾಹಿಸುತ್ತದೆ
- ಮತ್ತು ಸಾಕಷ್ಟು ವಿಟಮಿನ್ ಡಿ ತೆಗೆದುಕೊಳ್ಳಿ. ಇದು ಡೈರಿಯೇತರ ಕ್ಯಾಲ್ಸಿಯಂ ಮೂಲಗಳನ್ನು ಪಡೆದುಕೊಳ್ಳಲು ದೇಹಕ್ಕೆ ಬೇಕಾಗುತ್ತದೆ.
ಈಗ ವಿಟಮಿನ್ ಡಿ ಹುಡುಕಾಟಕ್ಕೆ….