ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿದೆಯೇ? ಸೀನು ಅಥವಾ ಮೂಗು ಕಟ್ಟುತ್ತಿದೆಯೇ? ಕೆಮ್ಮು ಕೂಡ ಇದೆಯೇ? ಹಾಗಾದರೆ ವಸಂತ ಕಾಲ ಬಂದಿದೆ. ಈ ಸಮಯದಲ್ಲಿ ಇದು ಎಲ್ಲರ ಕತೆಯೂ ಹೌದು.
ವಾತಾವರಣದ ಉಷ್ಣತೆ ಮತ್ತು ತೇವಾಂಶ ಈ ಸಮಯದಲ್ಲಿ ಹೆಚ್ಚುವುದರಿಂದ ಗಾಳಿಯಲ್ಲಿರುವ ಸೂಕ್ಷ್ಮಾಣುಗಳು ಬೆಳೆಯುತ್ತಾ ಗಾಳಿಯಲ್ಲಿ ಚದುರತೊಡಗುತ್ತವೆ. ಪರಿಣಾಮವಾಗಿ ಅಲರ್ಜಿ ಉಂಟಾಗುತ್ತದೆ. ಮೂಗು ಸೋರುವಿಕೆ ಶುರುವಾಗಲು ಅಥವಾ ಕಣ್ಣು ಉರಿಯಲು ನೀವು ಹೂವಿನ ಬಳಿಯೇ ಹೋಗಬೇಕೆಂದಿಲ್ಲ. ಪರಾಗಗಳು ಮೈಲುಗಟ್ಟಲೆ ದೂರ ಒಟ್ಟಾಗಿ ಸಂಚರಿಸಬಲ್ಲವು. ಈ ಅಲರ್ಜಿಕಾರಕಗಳು (ಹೂವಿನ ಪರಾಗ, ಧೂಳು, ಕೆಲವು ಶಿಲೀಂಧ್ರಗಳು) ಮುಂಜಾನೆ ಮತ್ತು ಸಂಜೆ ಸಮಯದ ತಂಪು ವಾತಾವರಣದಲ್ಲಿ ಒಟ್ಟುಗೂಡಿ, ಮಧ್ಯಾಹ್ನದ ಬಿಸಿಲಿಗೆ ಮತ್ತೆ ಎದ್ದು ಹಾರತೊಡಗುತ್ತವೆ. ನಿಜದಲ್ಲಿ ನಮ್ಮ ದೇಹದ ರಕ್ಷಣಾ ವ್ಯವಸ್ಥೆ ಅಲರ್ಜಿಕಾರಕಗಳೊಂದಿಗೆ ಹೊರಡುವುದೇ ಅಲರ್ಜಿ. ಹಿಸ್ಟಾಮೈನ್ ಮತ್ತು ಆಂಟಿಬಾಡಿಗಳನ್ನು ದೇಹ ಹೊರಸೂಸುವುದರಿಂದಲೇ ಅಲರ್ಜಿ ಉಂಟಾಗಿ ಕಿರಿಕಿರಿ ಅನುಭವಿಸುವುದು ಮತ್ತು ಇನ್ನೊಂದು ಕಪ್ ಕಾಫಿಗಾಗಿ ಹಂಬಲಿಸುವುದು.
ಮಾತ್ರೆಗಳನ್ನು ತಿಂದರೆ ಖಂಡಿತವಾಗಿ ಅಲರ್ಜಿಯನ್ನು ತಡೆಯಬಹುದು. ಆದರೆ ಅದು ಶಾಶ್ವತ ಪರಿಹಾರ ಅಲ್ಲವೇ ಅಲ್ಲ. ಬನ್ನಿ, ನೈಸರ್ಗಿಕ ಗಿಡಮೂಲಿಕೆಗಳಿಂದ ನಗರದ ಅಲರ್ಜಿ ಸಮಸ್ಯೆಯನ್ನು ಸೋಲಿಸಬಹುದಾದ ಕೆಲವು ಹಳೆಯ ಕಾಲದ ವಿಧಾನಗಳನ್ನು ನೋಡೋಣ.
ನಮಗೆ ಪ್ರಕೃತಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲದ ಕಾರಣ ನಾವು ಮಾಡಬಹುದಾದ ಕೆಲಸವೆಂದರೆ, ದೇಹದ ಅತಿಸಂವೇದನಾಶೀಲತೆಯನ್ನು ತಣಿಸಬಹುದಾದ ದಾರಿಗಳನ್ನು ಹಿಡಿಯುವುದು. ರೋಗನಿವಾರಣೆಗೆ ನೈಸರ್ಗಿಕ ಗಿಡಮೂಲಿಕೆಗಳ ಮೊರೆ ಹೋಗುವುದು ನಿಜದಲ್ಲಿ ಸ್ವಾಭಾವಿಕ ಕ್ರಿಯೆಯೇ ಆಗಿದೆ. ಅವುಗಳಲ್ಲಿ ಆಂಟಿ ಹಿಸ್ಟಾಮೈನ್ ಮತ್ತು ಉರಿಯೂತ ನಿವಾರಕ ಗುಣಗಳಿವೆ. ನೀವು ತೆಗೆದುಕೊಳ್ಳುವ ವಿಧಾನವಾದ ಮೇಲೆ ಅವು ಮೂಗುಗಟ್ಟುವಿಕೆಗೆ, ಮಾಸ್ಟ್ ಸೆಲ್ ಸ್ಟಬಿಲೈಸರುಗಳಾಗಿ, ರೋಗನಿರೋಧಕ ಶಕ್ತಿ ವರ್ಧಕಗಳಾಗಿ ಕೆಲಸ ಮಾಡುತ್ತವೆ.
7 ನೈಸರ್ಗಿಕ ಗಿಡಮೂಲಿಕೆಗಳು ಮತ್ತು ಅವುಗಳ ಉಪಯೋಗಗಳು
ಹಲವು ಸಂಶೋಧನೆಗಳ ಫಲವಾಗಿ ನಾವು ಇಲ್ಲಿ 7 ಅತ್ಯುತ್ತಮ ನೈಸರ್ಗಿಕ ಗಿಡಮೂಲಿಕೆಗಳನ್ನು ಪಟ್ಟಿ ಮಾಡಿದ್ದೇವೆ. ಇವು ಸುಲಭದಲ್ಲಿ ದೊರೆಯುತ್ತವೆ, ಸುಲಭವಾಗಿ ಬಳಸಬಹುದು ಮತ್ತು ನಿಮ್ಮ ನಾಲಗೆಗೆ ಹೊಸ ರುಚಿಯನ್ನೂ ನೀಡುತ್ತವೆ. ಗಿಡಮೂಲಿಕೆಗಳ ಸೌಂದರ್ಯವು ಅದರ ಶಕ್ತಿಯಲ್ಲಿ ಅಡಗಿದೆ. ಕೆಲವೇ ಕೆಲವು ಚಿಗುರುಗಳು ಪವಾಡಗಳನ್ನೇ ಸೃಷ್ಟಿಸಬಲ್ಲವು:
ಡ್ವಾರ್ಫ್ ಮಾರ್ನಿಂಗ್ ಗ್ಲೋರಿ: ವಿಷ್ಣುಕ್ರಾಂತಿ (Evolvulus Alsondis)
ಈ ಹಸಿರೆಲೆ ಕರ್ನಾಟಕದ ಉದ್ದಗಲಕ್ಕೂ ಕಾಣಸಿಗುತ್ತದೆ. ಇದರಲ್ಲಿ ಎರಡು ವಿಧಗಳಿವೆ: ಬಿಳಿ ಮತ್ತು ನೀಲಿ.
ಹೇಗೆ ಕೆಲಸ ಮಾಡುತ್ತದೆ: ಈ ಗಿಡದ ರಾಸಾಯನಿಕ ಪರೀಕ್ಷೆಯನ್ನು ನಡೆಸಿದಾಗ ಅದರಲ್ಲಿ ಕಾರ್ಬೋಹೈಡ್ರೇಟುಗಳು, ಪ್ರೊಟೀನುಗಳು, ಆಲ್ಕಲಾಯ್ಡುಗಳು, ಫ್ಯಾಟಿ ಆಸಿಡುಗಳು, ಸ್ಟೀರಾಯ್ಡುಗಳು, ಕೌಮಾರಿನುಗಳು, ಫ್ಲೇವನಾಯ್ಡುಗಳು ಮತ್ತು ಗ್ಲೈಕೋಸೈಡುಗಳು ಮೊದಲಾದ ಸಕ್ರಿಯ ರಾಸಾಯನಿಕಗಳನ್ನು ಪತ್ತೆ ಮಾಡಿದರು. ಈ ರಾಸಾಯನಿಕಗಳು ಸಿಎನ್ಎಸ್ ಖಿನ್ನತೆ, ಆಂಕ್ಸಿಯೋಲಿಟಿಕ್, ಸಾಂತ್ವನದಾಯಕ, ಖಿನ್ನತೆ ನಿವಾರಕ, ಒತ್ತಡ ನಿವಾರಕ, ನ್ಯೂರೋಡಿಜನರೇಟಿವ್, ಆಂಟಿ ಆಮ್ನೆಸಿಕ್, ಆಂಟಿಆಕ್ಸಿಡೆಂಟ್, ಹೈಪೊಲಿಪಿಡೆಮಿಕ್, ಇಮ್ಮ್ಯೂನೊಮಾಡ್ಯುಲೇಟರಿ, ಅನಾಲ್ಜೆಸಿಕ್, ಶಿಲೀಂಧ್ರ ನಿರೋಧಕ, ಬ್ಯಾಕ್ಟೀರಿಯಾ ನಿರೋಧಕ, ಮಧುಮೇಹ ನಿರೋಧಕ, ಅಲ್ಸರ್ ನಿರೋಧಕ, ಆಂಟಿಕಟೋನಿಕ್ ಮತ್ತು ಹೃದಯ ಸಂಬಂಧಿ ಗುಣಗಳನ್ನು ಹೊಂದಿವೆ.
ರುಚಿ: ಸಣ್ಣ ಕಹಿ ಮತ್ತು ಸಿಹಿ
ಉಪಯೋಗ:
- ನೀರಿನಲ್ಲಿ ಮಾಡಿದ ಕಷಾಯ (1:40) – ದಿನಕ್ಕೆ 1/2 ಕಪ್ ಕುಡಿಯಿರಿ.
- ತಾಜಾ ಎಲೆಯ ಜ್ಯೂಸು – ದಿನಕ್ಕೆ ಎರಡು ಬಾರಿ 1 ಟೀ ಚಮಚ ಕುಡಿಯಿರಿ.

ಕರಿಬೇವಿನ ಎಲೆ (Murraya koenigii)
ಕರಿಬೇವಿನ ಎಲೆಯನ್ನು ಭಾರತದ ಉಷ್ಣ ಮತ್ತು ತೇವಾಂಶ ಇರುವ ಪ್ರದೇಶಗಳಲ್ಲಿ ಇದನ್ನು ಬೆಳೆಯಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಹಿತ್ತಿಲ ಕೈತೋಟಗಳಲ್ಲಿ ಬೆಳೆಯುತ್ತಾರೆ.
ಹೇಗೆ ಕೆಲಸ ಮಾಡುತ್ತದೆ: ಈ ಸುಗಂಧ ಭರಿತ ಎಲೆಯಲ್ಲಿ ಕೊನಿನ್ ಎಂಬ ಗ್ಲೂಕೋಸಿನ ಸಕ್ರಿಯ ಅಂಶ ಇದೆ. ಕರಿಬೇವಿನ ಎಲೆಯಲ್ಲಿ ಅಗತ್ಯ ಪೋಷಕಾಂಶಗಳಾದ ತಾಮ್ರ, ಖನಿಜಾಂಶಗಳು, ಕ್ಯಾಲ್ಸಿಯಂ, ರಂಜಕ, ನಾರಿನಂಶ, ಕಾರ್ಬೋಹೈಡ್ರೇಟುಗಳು, ಮೆಗ್ನೇಷಿಯಂ ಮತ್ತು ಕಬ್ಬಿನಾಂಶಗಳು ಹೇರಳವಾಗಿವೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಉರಿಯೂತವನ್ನು ಶಮನಗೊಳಿಸುತ್ತವೆ.

ಹನಿ ಸಕ್ಕಲ್: ಹಂದಿ ಪೊದೆ ಕೊಡೆ (Lonicera japonica)
ಹನಿ ಸಕ್ಕಲ್ ಭಾರತದ ಬೆಟ್ಟ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.
ಹೇಗೆ ಕೆಲಸ ಮಾಡುತ್ತದೆ: ಹನಿಸಕ್ಕಲ್ ಗಿಡದ ಎಲೆ ಮತ್ತು ಹೂವಿನಲ್ಲಿ ಅಮೋರ್ಫಸ್ ಗ್ಲೈಕೊಸೈಡ್, ಸ್ಯಾಲಿಸಿಲಿಕ್ ಆಸಿಡ್, ಸೆಕೊಯಿರಿಡಾಯ್ಡ್ ಮತ್ತು ಸೆಕೊಕ್ಸಿಲೊಗನಿನ್ ಅಡಗಿದೆ. ಟ್ಯಾನಿನ್ಸ್, ಇನೋಸಿಟಾಲ್ ಮತ್ತು ಲುಟೋಲಿನ್ ಕೂಡ ಇದೆ. ಈ ಎಲ್ಲ ಘಟಕಗಳು ಸೇರಿ ಹನಿಸಕ್ಕಲ್ ಗಿಡವನ್ನು ಸಿಹಿ ಮತ್ತು ಆರಾಮದಾಯಕ ಔಷಧಿಯಾಗಿ ಪರಿವರ್ತಿಸಿವೆ.

ಮಿಂಟ್: ಪುದೀನಾ (Lamiaceae family)
ಹೇಗೆ ಕೆಲಸ ಮಾಡುತ್ತದೆ: ಪುದೀನದಲ್ಲಿ ಬಾಷ್ಪಶೀಲ ಎಣ್ಣೆ, ಅಲಿಫಾಟಿಕ್ ಆಮ್ಲ, ಪುದೀನ ಆಲ್ಕೋಹಾಲ್ ಮತ್ತು ಮೆಂಥಾಲ್ ಹರಳುಗಳು ಇವೆ. ಇದು ಬೆವರುವಿಕೆಗೆ ಸಹಕಾರಿ. ಜ್ವರ, ಮೈಕೈ ನೋವು, ಕೆಮ್ಮು ಶಮನಗೊಳಿಸುತ್ತದೆ. ಜೊತೆಗೆ ಬ್ಯಾಕ್ಟೀರಿಯಾ ನಿರೋಧಕವಾಗಿಯೂ ಕೆಲಸ ಮಾಡುತ್ತದೆ.
ರುಚಿ: ಸಿಹಿ, ತಂಪು ಮತ್ತು ತೀಕ್ಷ್ಣ
ಉಪಯೋಗ:
- ಹಸಿ: ತಾಜಾ ಪುದೀನಾ ಸಲಾಡಿಗೆ ಉತ್ತಮ
- ಟೀ: ತಾಜಾ ಪುದೀನಾ ಎಲೆ ಸೇರಿಸಿದ ಚಾ ಕುಡಿಯಿರಿ
- ಕಷಾಯ: 1 ಗ್ರಾಂ ಲವಂಗ, 1 ಗ್ರಾಂ ಪುದೀನಾ, 2 ಹನಿಸಕ್ಕಲ್ ಮತ್ತು 50 ಮಿಲಿ ನೀರು – ಇದನ್ನು 5 ದಿನಗಳ ಕಾಲ ಪ್ರತಿದಿನ ಕುಡಿಯಿರಿ.

ರೋಸ್ಮರಿ
ರೋಸ್ಮರಿ ಗಿಡವು ಸೂಜಿಯಂತಹ ಎಲೆಗಳನ್ನು ಹೊಂದಿರುವ ನಿತ್ಯಹರಿದ್ವರ್ಣ ಗಿಡ. ಇದು ತುಳಸಿ ಮತ್ತು ಪುದೀನಾದ ಕುಟುಂಬಕ್ಕೆ ಸೇರಿದೆ.
ಹೇಗೆ ಕೆಲಸ ಮಾಡುತ್ತದೆ: ರೋಸ್ಮರಿಯಲ್ಲಿ ರೋಸ್ಮರಿನಿಕ್ ಆಸಿಡ್, ಕಫಾಯಿಕ್ ಆಸಿಡ್, ಉರ್ಸೋಲಿಕ್ ಆಸಿಡ್, ಬೇಟುಲಿನಿಕ್ ಆಸಿಡ್, ಕಾರ್ನೋಸಿಕ್ ಆಸಿಡ್ ಮತ್ತು ಕಾರ್ನೋಸೋಲ್ ಸೇರಿದಂತೆ ಹಲವು ಫೈಟೋಕೆಮಿಕಲ್ ಗಳು ಇವೆ. ಇವು ಮುಖ್ಯವಾಗಿ ಅಲರ್ಜಿಕಾರಕಗಳ ಜೊತೆ ಹೋರಾಡುವ ಆಂಟಿಆಕ್ಸಿಡೆಂಟುಗಳಾಗಿ ಕೆಲಸ ಮಾಡುತ್ತವೆ. ಜೊತೆಗೆ ಆರಾಮದಾಯಕ ಅನುಭವವನ್ನೂ ನೀಡುತ್ತದೆ.
ರುಚಿ: ಬೆಚ್ಚಗೆ, ಖಾರ ಮತ್ತು ಸಿಹಿ
ಉಪಯೋಗ:
- ಮಸಾಲೆ: ಊಟದ ಮೇಲೆ ಸ್ವಲ್ಪ ರೋಸ್ಮರಿಯನ್ನು ಸಿಂಪಡಿಸಿರಿ.
- ಟೀ: ತಾಜಾ ರೋಸ್ಮರಿಯಿಂದ ಮಾಡಿದ ಟೀ ಕುಡಿಯಿರಿ.
- ಕಷಾಯ: ನೀರಿನಲ್ಲಿ ಮಾಡಿದ ಕಷಾಯ (1:40) – ದಿನಕ್ಕೆ 1/2 ಕಪ್ ಕುಡಿಯಿರಿ.

ಸಬ್ಬಸಿಗೆ: ದಿಲ್ (Anethum graveolens)
ಸಬ್ಬಸಿಗೆ ಆಕರ್ಷಕವಾದ ನೈಸರ್ಗಿಕ ಗಿಡ. ಇದು ಕಡು ಹಸಿರು ಬಣ್ಣ ಮತ್ತು ಪುಕ್ಕದಂತಹ ಎಲೆಗಳನ್ನು ಹೊಂದಿದೆ. ಕೊಡೆಯಾಕಾರದ ಹೂ ಬಿಡುವ ಇದು ಭಾರದಾದ್ಯಂತ ಬೆಳೆಯುತ್ತದೆ.
ಹೇಗೆ ಕೆಲಸ ಮಾಡುತ್ತದೆ: ಸಣ್ಣ ಸೂಜಿಯಂತಹ ಎಲೆಗಳಲ್ಲಿ ಅನೆಥಿನ್, ಫೆಲ್ಲಂಡ್ರೆನ್, ಡಿ-ಲಿಮೋನೆನ್, ಅಪಿಯೋಲ್ ತರದ ಬಾಷ್ಪಶೀಲ ಎಣ್ಣೆಗಳು ಅಡಗಿವೆ. ಇವು ಇದರ ಆಂಟಿಆಕ್ಸಿಡೆಂಟ್ ಗುಣಕ್ಕೆ ಕಾರಣವಾಗುತ್ತದೆ. ನರಕೋಶವನ್ನುಆರಾಮದಾಯಕಗೊಳಿಸುವ ಜೊತೆಗೆ ದೇಹಕ್ಕೆ ಸಾಂತ್ವನವನ್ನುನೀಡುತ್ತದೆ.
ರುಚಿ: ಬಡೆಸೊಪ್ಪು, ಜೀರಿಗೆ ಮತ್ತು ಸೆಲೆರಿ ಜೊತೆ ಸೇರಿದಂತಹ ರುಚಿ. ಬೆಚ್ಚಗೆ ಮತ್ತು ಚೂರು ಕಹಿ.
ಉಪಯೋಗ:
- ಮಸಾಲೆ: ಸಬ್ಬಸಿಗೆಯನ್ನು ರಾಯ್ತ, ಚಟ್ನಿಗಳಿಗೆ ಸಿಂಪಡಿಸಿ.
- ಕಷಾಯ: ನೀರಿನಲ್ಲಿ ಮಾಡಿದ ಕಷಾಯ (1:40) – ದಿನಕ್ಕೆ 1/2 ಕಪ್ ಕುಡಿಯಿರಿ.

ಈ ನೈಸರ್ಗಿಕ ಗಿಡಮೂಲಿಕೆಗಳ ಅಲರ್ಜಿ ನಿರೋಧಕ ಗುಣಗಳ ಬಗ್ಗೆ ಅನೇಕ ಅಧ್ಯಯನಗಳು ತಿಳಿಸಿವೆ. ಆದರೆ ಅದ್ಭುತಗಳನ್ನು ಮಾಡಬಲ್ಲ ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಬೀಜಗಳು ಇನ್ನೂ ಅನೇಕ ಇವೆ. ನೈಸರ್ಗಿಕ ಗಿಡಮೂಲಿಕೆಗಳು ಮತ್ತು ಮಸಾಲೆಗಳಲ್ಲಿನ ಆಂಟಿಆಕ್ಸಿಡೆಂಟ್ ಮತ್ತು ಫೈಟೊನ್ಯೂಟ್ರಿಯೆಂಟ್ಗಳ ಹೊರತಾಗಿ, ಒಮೆಗಾ ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಸಿ ತುಂಬಾ ಬಲವಾದ ಅಲರ್ಜಿ ನಿರೋಧಕ ಘಟಕಗಳಾಗಿವೆ!
ಕೊನೆಯದಾಗಿ
ಯಾವ ರೋಗಕ್ಕಾಗಲೀ ರೋಗ ತಡೆಗಟ್ಟುವುದಕ್ಕಾಗಲೀ ಯಾವುದೇ ಮ್ಯಾಜಿಕ್ ಮದ್ದು ಇಲ್ಲ ಎಂದು ನಮಗೆಲ್ಲ ತಿಳಿದಿದೆ. ಅದು ಹೇಗೋ ಈ ‘ಕ್ಲಾರ್ಕ್ ಕೆಂಟ್’ ಆಹಾರಗಳನ್ನು ಸುಖಾಸುಮ್ಮನೆ ರಾಮಬಾಣ ಎಂದು ವ್ಯಾಖ್ಯಾನಿಸಲಾಗಿದೆ.
ಈ ಬಯೋಆಕ್ಟಿವ್ ನ್ಯೂಟ್ರಾಸ್ಯುಟಿಕಲ್ಗಳು ದೇಹದ ನಿರ್ದಿಷ್ಟ ಭಾಗ ಮತ್ತು ಕಾರ್ಯಗಳಿಗೆ ಎಷ್ಟು ಉತ್ತಮವವೋ, ಹೆಚ್ಚಿನ ಪ್ರಮಾಣದಲ್ಲಿ (ಡೋಸ್) ಅಥವಾ ದೀರ್ಘಾವಧಿಯಲ್ಲಿ (ಆವರ್ತನ) ತೆಗೆದುಕೊಂಡರೆ ಋಣಾತ್ಮಕ ಕೋಶಗಳನ್ನು ಅದೇ ರೀತಿಯಲ್ಲಿ ಪೋಷಿಸುತ್ತವೆ. ಹೆಚ್ಚಿನ ಪ್ರಮಾಣದ ಅರಿಶಿನವು ಕ್ಯಾನ್ಸರ್ ಕಾರಕವೂ ಆಗಬಹುದು.
ನೀವು ಒಳ್ಳೆಯ ಪೋಷಕಾಂಶಗಳನ್ನು ಆಯ್ದುಕೊಳ್ಳುವಾಗ ಅದರ ನಿರ್ಣಯಕ ಹಂತದಲ್ಲಿ ಆಹಾರದ ವೈವಿಧ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂಬುದೂ ಅತಿ ಮುಖ್ಯ ವಿಷಯ. ಆದ್ದರಿಂದ ಒಳ್ಳೆಯ ಊಟದ ಒಳ್ಳೆಯ ಗುಣಗಳು ಸರಿಯಾಗಿಯೇ ಕೆಲಸ ಮಾಡಬೇಕೆಂದರೆ ಅವುಗಳನ್ನು ನಿಮ್ಮ ದೈನಂದಿನ ಬದುಕಿನ ಭಾಗವಾಗಿಸಲೇಬೇಕು ಮತ್ತು ಚುರುಕಿನ ಜೀವನಶೈಲಿಯನ್ನು ರೂಢಿಸಿಕೊಳ್ಳಲೇಬೇಕು.
-ಇಶಿತಾ ಬಿಸ್ವಾಸ್