ಪೌಷ್ಠಿಕಾಂಶಗಳಿಂದ ರಾಜಮುಡಿ ಅಕ್ಕಿ ಬಳಸುವ ಮೂಲಕ ಬಿಳಿ ಅಕ್ಕಿಯ ಏಕತಾನತೆಯಿಂದ ಹೊರಬನ್ನಿ
ಅಕ್ಕಿಯೆಂಬ ಉಭಯಸಂಕಟ!!! ಹೌದು. ನನ್ನ ಜೀವನದಲ್ಲಿ ನಾನು ಇದನ್ನು ಹಲವು ಬಾರಿ ಎದುರಿಸಿದ್ದೇನೆ. ಏನು ಗೊತ್ತಾ? ದಕ್ಷಿಣ ಭಾರತೀಯನಾಗಿರುವುದರಿಂದ, ಬಾಲ್ಯದಿಂದಲೂ ಅಕ್ಕಿ ಮನೆಯಲ್ಲಿ ಪ್ರಧಾನ ಆಹಾರ ಧಾನ್ಯವಾಗಿದೆ. ಆದರೆ ಸಂದಿಗ್ಧತೆಯೆಂದರೆ ಎಂದರೆ ನಿಯಮಿತ ಬಳಕೆಯ ನಂತರ ಅದರ ಏಕತಾನತೆ ಬೇಸರ ತರಿಸತೊಡಗಿತು. ಈ ಏಕತಾನತೆಯಿಂದ ಹೊರಬರಲು ಇದ್ದ ಏಕೈಕ ಮಾರ್ಗವೆಂದರೆ ಅಕ್ಕಿಯ ವಿಭಿನ್ನ ಪ್ರಕಾರಗಳನ್ನು ಪ್ರಯತ್ನಿಸುವುದು. ಕೆಂಪು ಅಕ್ಕಿ, ಕಂದು ಅಕ್ಕಿ ಮತ್ತು ಬಾಸ್ಮತಿ ಸಾಕಷ್ಟು ಸಾಮಾನ್ಯವಾಗಿತ್ತು, ಆದರೆ ಹೆಚ್ಚು ತಿಳಿದಿಲ್ಲದ ಪ್ರಭೇದಗಳಲ್ಲಿ ಒಂದೆಂದರೆ ರಾಜಮುಡಿ ಅಕ್ಕಿ. ಇದು ಹಲವಾರು ಆರೋಗ್ಯ ಸಂಬಂಧಿ ಪ್ರಯೋಜನಗಳನ್ನು ಹೊಂದಿರುವ ಪೌಷ್ಟಿಕ ಕೆಂಪು ಅಕ್ಕಿ. ಆಗ ಅದು ನನ್ನ ಊರಿನಲ್ಲಿ ಲಭ್ಯವಿಲ್ಲದಿದ್ದರೂ, ಇದು ದೇಶದ ಪ್ರಮುಖ ಅಕ್ಕಿ ಪ್ರಭೇದಗಳಲ್ಲಿ ಒಂದಾಗಿತ್ತು.
ರಾಜಮುಡಿ ಕೆಂಪಕ್ಕಿಯ ಇತಿಹಾಸ
ಮಾರುಕಟ್ಟೆಯಲ್ಲಿ ಲಭ್ಯವಿರುವ ಅಪರೂಪದ ಕೆಂಪಕ್ಕಿಗಳಲ್ಲಿ ಒಂದಾದ ರಾಜಮುಡಿ, ಸಾಂಪ್ರದಾಯಿಕವವಾಗಿ ಮೈಸೂರಿನ ಒಡೆಯರ್ಗಳ ಯುಗದೊಂದಿಗೆ ತನ್ನನ್ನು ಗುರುತಿಸಿಕೊಳ್ಳುತ್ತದೆ. ಮೈಸೂರು ರಾಜರು ತೆರಿಗೆ ಪಾವತಿಸಲು ಸಾಧ್ಯವಾಗದ ಜನರಿಗೆ ಅದರ ಬದಲಾಗಿ ಪೌಷ್ಠಿಕಾಂಶದ ರಾಜಮುಡಿ ಅಕ್ಕಿ ನೀಡುವಂತೆ ಹೇಳಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ರಾಜಮುಡಿ ಅಕ್ಕಿ ಪಾಲಿಶ್ ಆಗಿರುವುದಿಲ್ಲ ಮತ್ತು ಇದು ಕೆಂಪು ಮತ್ತು ಕಂದು ಬಣ್ಣದ ಮಿಶ್ರಣದಲ್ಲಿ ಬರುತ್ತದೆ. ಒಂದು ಹಂತದಲ್ಲಿ, ಈ ಅಕ್ಕಿ ಹೆಚ್ಚು ಜನಪ್ರಿಯವಾಗಿತ್ತು ಮತ್ತು ನಂತರ ಬಿಳಿ ಅಕ್ಕಿ ಜನಪ್ರಿಯವಾಗುತ್ತಿದ್ದಂತೆ ಇದು ಮರೆಗೆ ಸರಿಯಿತು. ಸಾವಯವ ಮತ್ತು ಆರೋಗ್ಯಕರ ಅಕ್ಕಿಯ ಅರಿವು ಹೆಚ್ಚಾದಂತೆ, ಸಾಂಪ್ರದಾಯಿಕ ರಾಜಮುಡಿ ಅಕ್ಕಿ ಕೂಡ ಪ್ರಾಮುಖ್ಯತೆಯನ್ನು ಪಡೆಯಿತು.
ರಾಜಮುಡಿ ಅಕ್ಕಿಯ ಪ್ರಯೋಜನಗಳು
ಪೌಷ್ಠಿಕಾಂಶಗಳಿಂದ ಕೂಡಿದ ರಾಜಮುಡಿ ಅಕ್ಕಿ ದೈನಂದಿನ ಬಳಕೆಗೆ ಒಳ್ಳೆಯದು. ಪಾಲಿಶ್ ಮಾಡಲಾದ ಅಕ್ಕಿಗೆ ಹೋಲಿಸಿದರೆ ಇದು ಉತ್ತಮ ಆಹಾರದ ಫೈಬರ್ ಹೊಂದಿದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ಸ್ ಮತ್ತು ಫೈಟೊನ್ಯೂಟ್ರಿಯಂಟ್ಗಳಲ್ಲಿ ಸಮೃದ್ಧವಾಗಿದೆ. ಆಂಟಿ ಆಕ್ಸಿಡೆಂಟ್ಸ್ ನಮ್ಮ ದೇಹವನ್ನು ಸೋಂಕುಗಳು ಮತ್ತು ಫ್ರೀ ರ್ಯಾಡಿಕಲ್ಸ್ಗಳಿಂದ ತಡೆಯುತ್ತವೆ. ರಾಜಮುಡಿ ಅಕ್ಕಿಯಲ್ಲಿರುವ ಸತು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ದೇಹದ ಚೇತರಿಕೆ ಮತ್ತು ಗುಣಮುಖಗೊಳ್ಳುವುದನ್ನು ವೇಗಗೊಳಿಸುತ್ತದೆ. ಇದು ಹೃದಯಕ್ಕೂ ಹಲವು ಪ್ರಯೋಜನಗಳನ್ನು ನೀಡುತ್ತದೆ. ಇದು ಅಪಧಮನಿಗಳಲ್ಲಿ ಸಂಗ್ರಹವಾಗುವ ದದ್ದನ್ನು ತೆಗೆದುಹಾಕುತ್ತದೆ. ರಾಜಮುಡಿ ಅಕ್ಕಿ ಮೂಳೆಗೆ ಬಲವನ್ನು ಒದಗಿಸಲು ಹೆಸರುವಾಸಿಯಾಗಿದೆ. ಇದು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಸಹ ಹೊಂದಿದೆ.
ರಾಜಮುಡಿ ಅಕ್ಕಿಯ ಅನ್ನ ಮಾಡುವುದು ಹೇಗೆ?
ಅಕ್ಕಿಯನ್ನು ಶುದ್ಧ ನೀರಿನಲ್ಲಿ ತೊಳೆದು ಒಂದು ಗಂಟೆ ನೆನೆಸಿಡಿ. ಅಕ್ಕಿಗಿಂತ ಎರಡು ಪಟ್ಟು ನೀರು ಸೇರಿಸಿ. 1 ಶಿಳ್ಳೆ ಬರುವ ತನಕ ಹೆಚ್ಚಿನ ಜ್ವಾಲೆಯಲ್ಲಿ ಬೇಯಿಸಿ, ನಂತರ ಜ್ವಾಲೆಯನ್ನು ಕಡಿಮೆ ಮಾಡಿ ಮತ್ತು ಇನ್ನೂ 3 ಸೀಟಿಗಳು ಬರುವ ತನಕ ಬೇಯಿಸಿ. ದೋಸೆ ಅಥವಾ ಇಡ್ಲಿಯಂತಹ ತಿನಿಸುಗಳಲ್ಲಿ ಇದನ್ನು ಸಾಮಾನ್ಯ ಬಿಳಿ ಅಕ್ಕಿಯ ಬದಲು ಸುಲಭವಾಗಿ ಬಳಸಬಹುದು ಮತ್ತು ರೊಟ್ಟಿ, ಕಡುಬು ಮತ್ತು ಇತ್ಯಾದಿ ತಯಾರಿಸಲು ಅಕ್ಕಿ ಹಿಟ್ಟನ್ನು ಬಳಸಬಹುದು.


ರಾಜಮುಡಿ ಅಕ್ಕಿಯ ಫ್ರೈಡ್ ರೈಸ್
ಪದಾರ್ಥಗಳು
ಮಿಶ್ರ ತರಕಾರಿಗಳು: 250 ಗ್ರಾಂ
ರಾಜಮುಡಿ ಅಕ್ಕಿ: 1 ಕಪ್ (ಒಂದು ಗಂಟೆ ನೆನೆಸಿದ್ದು)
ಬೆಳ್ಳುಳ್ಳಿ: 8-10 ಎಸಳುಗಳು (ನುಣ್ಣಗೆ ಕತ್ತರಿಸಿದ)
ಕರಿಮೆಣಸಿನ ಪುಡಿ: ¼ ಟೀಸ್ಪೂನ್
ಕಾರ್ನ್ಫ್ಲೋರ್: 1tsp
ಉಪ್ಪು: ರುಚಿಗೆ ತಕ್ಕಷ್ಟು
ವಿನೆಗರ್: 1 ಟೀಸ್ಪೂನ್.
ಕೆನೊಲಾ ಎಣ್ಣೆ: 4 ಟೇಬಲ್ ಸ್ಪೂನ್
ತಯಾರಿಸುವ ವಿಧಾನ:
ರಾಜಮುಡಿ ಅಕ್ಕಿಯನ್ನು 2 ಕಪ್ ನೀರಿನಲ್ಲಿ ಪ್ರೆಷರ್ ಕುಕ್ಕರಿನಲ್ಲಿ 2 ಸೀಟಿಗಳ ತನಕ ಬೇಯಿಸಿ, ಬೇಯಿಸಿದ ನಂತರ ಅನ್ನವನ್ನು ತಟ್ಟೆಯಲ್ಲಿ ಹರಡಿ ಗಾಳಿಗೆ ಆರಲು ಬಿಡಿ.
ತರಕಾರಿಗಳನ್ನು ಸಣ್ಣಗೆ ಹಚ್ಚಿಕೊಳ್ಳಿ
ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಬೆಳ್ಳುಳ್ಳಿ ಸೇರಿಸಿ, ಅದು ಕಂದು ಬಣ್ಣಕ್ಕೆ ತಿರುಗಲು ಪ್ರಾರಂಭವಾದ ನಂತರ ಸೌಟಿನ ತುಂಬಾ ನೀರು ಸೇರಿಸಿ ಮತ್ತು ಇದಕ್ಕೆ ಕಾರ್ನ್ಫ್ಲೋರ್ ಸೇರಿಸಿ ಮತ್ತು ಅದು ಸಾಸ್ ರೀತಿ ಆಗುವವರೆಗೆ ಬೇಯಲು ಬಿಡಿ.
ತರಕಾರಿಗಳನ್ನು ಸೇರಿಸಿ, ಉತ್ತಮ ರೀತಿಯಲ್ಲಿ ತಿರುಗಿಸಿ ಮತ್ತು ಕೊನನೆಯದಾಗಿ ಅನ್ನ ಸೇರಿಸಿ.
ನಿಮ್ಮ ಇಚ್ಛೆಗೆ ತಕ್ಕಂತೆ ಒಂದಿಷ್ಟು ವಿನೆಗರ್ ಮತ್ತು ಒಗ್ಗರಣೆಯೊಂದಿಗೆ ಮುಗಿಸಿ.