ಮಗು ಬೆಳೆದಂತೆ ತಾಯಿಯ ಮಮತೆಯೂ ಬೆಳೆಯುತ್ತದೆ. ಜೊತೆಗೆ ಮಗುವಿನ ಪೌಷ್ಟಿಕಾಂಶಗಳ ಬೇಡಿಕೆಯೂ ಏರುತ್ತದೆ. ಮಾರ್ಗಸೂಚಿ ಪ್ರಕಾರ 6 ತಿಂಗಳ ನಂತರ ವೀನಿಂಗ್ ಶುರು ಮಾಡಬೇಕು. ವೀನಿಂಗ್ ಅಂದರೆ ತಾಯಿಯ ಹಾಲು ಅಲ್ಲದೆ ಇತರ ಆಹಾರ ಕೊಡುವುದು. ಇದಕ್ಕಿಂತ ಮೊದಲು ಮಗುವಿಗೆ ಬೇಕಾದ ಪೌಷ್ಟಿಕಾಂಶಗಳು ತಾಯಿಯಿಂದ ದೊರೆಯುತ್ತವೆ. ಈಗ ಬೇರೆ ಮೂಲಗಳಿಂದ ಪೋಷಕಾಂಶಗಳನ್ನು ಪಡೆಯುವ ಸಮಯ. ಮಕ್ಕಳು ವೀನಿಂಗಿಗೆ ತಯಾರಾಗಿದ್ದಾರೆ ಎಂಬುದನ್ನು ಅವರ ನಡವಳಿಕೆಗಳಿಂದಲೇ ಗುರುತಿಸಬಹುದು. ಉದಾಹರಣೆಗೆ: ಹೆಚ್ಚಿನ ಹಸಿವು, ತೂಕ ವ್ಯತ್ಯಾಸ.
ನಿಮಗೆ ಇದು ಮೊದಲ ಮಗುವಾಗಿದ್ದಲ್ಲಿ ನಿಮ್ಮ ಗೊಂದಲಗಳು ಮುಗಿಯಿಲಿಕ್ಕಿಲ್ಲ. ಮತ್ತು ನಿಮ್ಮ ಊಹೆಗಳ ಮೇಲೆ ನಿಮಗೆ ಆತ್ಮವಿಶ್ವಾಸ ಇರುವುದಿಲ್ಲ. ‘ಯಾವಾಗ ವೀನಿಂಗ್ ಶುರು ಮಾಡಬೇಕು?’, ‘6 ತಿಂಗಳ ನಂತರ ಯಾಕಾಗಿ ವೀನಿಂಗ್ ಮಾಡಬೇಕು?’, ‘ಗಟ್ಟಿ ಆಹಾರವನ್ನು ಮಗುವಿಗೆ ತಿನ್ನಿಸುವುದು ಹೇಗೆ?’, ‘ಯಾವ ಧಾನ್ಯ, ತರಕಾರಿ ಅಥವಾ ಹಣ್ಣಿನಿಂದ ವೀನಿಂಗ್ ಶುರು ಮಾಡಬೇಕು?’, ‘ನಿರ್ದಿಷ್ಟ ಆಹಾರವನ್ನು ಮಗು ತಿನ್ನುವುದಿಲ್ಲವಾದರೆ ಏನು ಮಾಡಬೇಕು?’ ಮೊದಲಾದ ಹಲವು ಪ್ರಶ್ನೆಗಳು ಈಗಾಗಲೇ ಗೂಗಲಲ್ಲಿ ಧಾರಾಳವಾಗಿ ಕೇಳಿ ಬರುತ್ತಿರಬಹುದು.
ತಾಯಿಯ ಮೊಲೆಹಾಲಿನಿಂದ ವೀನಿಂಗ್/ಗಟ್ಟಿ ಆಹಾರಕ್ಕೆ ಹೊರಳಿಕೊಳ್ಳುವ ಈ ಸಂದಿಗ್ದತೆಗೆ ಉತ್ತರಿಸಬೇಕಾಗಿದೆ:
ವೀನಿಂಗ್ ಬಗ್ಗೆ ನೀವು ತಿಳಿದಿರಬೇಕಾದದ್ದು
- ಯಾವಾಗ? – 6 ತಿಂಗಳ ನಂತರ. WHO 6 ತಿಂಗಳ ತನಕ ಮೊಲೆಹಾಲನ್ನು ಮಾತ್ರ ಸೂಚಿಸುತ್ತದೆ.
ಮಕ್ಕಳು ಅವರದ್ದೇ ಆದ ಸಮಯ ತೆಗೆದುಕೊಂಡರೂ ಪರವಾಗಿಲ್ಲ.
- ಯಾಕೆ? – ಬೆಳೆವಣಿಗೆಗೆ ಬೇಕಾದ ಪೋಷಕಾಂಶಗಳ ಹೆಚ್ಚಳ ಮುಖ್ಯ ಕಾರಣ.
- ಹೇಗೆ ಮತ್ತು ಏನು? – ಮೊದಲಿಗೆ ಒಂದೇ ಪದಾರ್ಥದಲ್ಲಿ ಶುರು ಮಾಡಿ (ಧಾನ್ಯಗಳು ಉತ್ತಮ, ಉದಾ: ಅಕ್ಕಿಯಲ್ಲಿ ಅಲರ್ಜಿ ಉಂಟಾಗುವ ಸಾಧ್ಯತೆ ಬಹಳ ಕೆಡಿಮೆ) ಮಗು ನಿಧಾನಕ್ಕೆ ಒಗ್ಗಿಕೊಳ್ಳುತ್ತದೆ. ನಂತರ ಮಗುವಿನ ಇಷ್ಟಗಳನ್ನು ನೋಡಿಕೊಂಡು ತರಕಾರಿ, ಹಣ್ಣು ಅಥವಾ ಬೇಳೆಕಾಳುಗಳನ್ನು ಸೇರಿಸುತ್ತ ಹೋಗಿ.
ಒಂದು ಸಲಹೆ: ಮಗುವಿನ ಅಂಗಾಂಗಳು ಪೂರ್ತಿ ಬೆಳವಣಿಗೆಗೊಂಡಿರದ ಈ ಹಂತದಲ್ಲಿ ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನೇ (ಎಮಲ್ಸಿಫೈಡ್ ಕೊಬ್ಬು, ಸರಳ ಕಾರ್ಬೋಹೈಡ್ರೇಟ್ಗಳು) ನೀಡಿರಿ. ಮಗು ಅಂಬೆಗಾಲಿಡುವ ಹಂತದಲ್ಲಿ ಮಗುವಿನ ಬೆಳವಣಿಗೆಗೆ ಸಹಕಾರಿಯಾಗುವ ಪೋಷಕಾಂಶಗಳಿರುವ ಶಿಶು ಆಹಾರ ಸೇರಿಸಿ.
ಆಹಾರದ ಆದ್ಯತೆಗಳನ್ನು ತೀರ್ಮಾನಿಸಲು ಇದು ಸರಿಯಾದ ವಯಸ್ಸು. ಹಾಗಾಗಿ ಎಚ್ಚರದಿಂದ ಆಯ್ದುಕೊಳ್ಳಿ. ವೈವಿಧ್ಯತೆ ಇರುವ ಆಹಾರ ಹೆಚ್ಚಾಗಿ ಸೇರಿಸಿ. ಅಧಿಕ ಸಕ್ಕರೆ, ಉಪ್ಪು, ಹೆಚ್ಚಿನ ನಾರಿನಂಶ, ಕಡಿಮೆ ಕೊಬ್ಬು ಮತ್ತು ಕಡಿಮೆ ಕ್ಯಾಲೋರಿ ಆಹಾರಗಳನ್ನು ತ್ಯಜಿಸಿ. ಮಗುವಿನ ಆಹಾರ ಕ್ರಮವನ್ನು ಬದಲಾಯಿಸಲು ಬೇಕಾದಷ್ಟು ಶಿಶು ಆಹಾರ ರೆಸಿಪಿಗಳು ಲಭ್ಯ ಇವೆ. ಮೊದ ಮೊದಲಿಗೆ ಆಹಾರವೆಲ್ಲ ಚೆಲ್ಲಾಪಿಲ್ಲಿಯಾಗಿ ವೀನಿಂಗ್ ಎಂಬುದು ತ್ರಾಸದಾಯಕ ಕೆಲಸ ಆಗಬಹುದು. ಆದರೆ ನಿಧಾನಕ್ಕೆ ನೀವು ಮತ್ತು ನಿಮ್ಮ ಮಗು ಇದಕ್ಕೆ ಒಗ್ಗಿಕೊಳ್ಳುತ್ತೀರಿ.
ಶಕ್ತಿ ವರ್ಧಕವಾಗಿಯೂ, ಸಾಂಪ್ರದಾಯಿಕ ಆಹಾರದಲ್ಲಿನ ಡಯಟರಿ ಬಲ್ಕ್ ಕಡಿಮೆಗೊಳಿಸಲೂ ಉತ್ತಮ ವಿಧಾನವೆಂದರೆ ಧಾನ್ಯಗಳಿಂದ ಪಡೆದ ಅಮೈಲೇಸ್ ಸಮೃದ್ಧ ಆಹಾರ (ARF) ಸೇರಿಸುವುದು. ARF ತಯಾರಿಸುವುದು ತುಂಬಾ ಸುಲಭ ಮತ್ತು ಇದನ್ನು ಮನೆಯಲ್ಲಿಯೇ ತಯಾರಿಸಬಹುದು.
ಅಮೈಲೇಸ್ ಸಮೃದ್ಧ ಆಹಾರ (ARF) ತಯಾರಿಸುವ ವಿಧಾನ
- 250 ಗ್ರಾಂ ಗೋಧಿ ತೆಗೆದುಕೊಳ್ಳಿ
- 2-3 ಪಟ್ಟು ನೀರು ಸೇರಿಸಿ
- 8 ಗಂಟೆಗಳ ಕಾಲ ನೆನೆಸಿಡಿ
- ಹೆಚ್ಚುವರಿ ನೀರನ್ನು ಬತ್ತಿಸಿ, 24-48 ಗಂಟೆಗಳ ಕಾಲ ಕತ್ತಲಲ್ಲಿ ಮೊಳಕೆ ಬರಿಸಿ
- 5-8 ಬಿಸಿಲಲ್ಲಿ ಒಣಗಿಸಿ
- ನೀರಿನಂಶವನ್ನು ಪೂರ್ಣವಾಗಿ ಬತ್ತಿಸಲು ಒಂದು ಪ್ಯಾನಿನಲ್ಲಿ ನಿಧಾನಕ್ಕೆ ಹುರಿಯಿರಿ
- ಚೆನ್ನಾಗಿ ರುಬ್ಬಿ ಪುಡಿಮಾಡಿಕೊಳ್ಳಿ (ARF)
- ಗಾಳಿಯಾಡದ ಜಾರಿನಲ್ಲಿ ಶೇಖರಿಸಿ
5 ಗ್ರಾಂ (ಒಂದು ಟೀ ಸ್ಪೂನ್) ARF ಪ್ರತಿ ಆಹಾರದಲ್ಲೂ ಸೇರಿಸಿ
ನಿಮ್ಮ ಮಗುವಿನ ವೀನಿಂಗ್ ಶುರು ಮಾಡಲು ಕೆಲವು ಸುಲಭ ರೆಸಿಪಿಗಳು ಇಲ್ಲಿವೆ:
ಖಿಚಡಿ
ಸಾಮಗ್ರಿಗಳು: ಅಕ್ಕಿ (35 ಗ್ರಾಂ), ಹೆಸರು ಬೇಳೆ (10 ಗ್ರಾಂ), ಸೊಪ್ಪು ತರಕಾರಿಗಳು (2 ಟೀ ಸ್ಪೂನ್), ಕೊಬ್ಬು (2 ಟೀ ಸ್ಪೂನ್), ಜೀರಿಗೆ.
ವಿಧಾನ: ಅಕ್ಕಿ ಮತ್ತು ಬೇಳೆ ತೊಳೆಯಿರಿ. ನೀರು ಬತ್ತಿ ಧಾನ್ಯಗಳು ಮೃದುವಾಗುವವರೆಗೆ ಉಪ್ಪು ಹಾಕಿದ ನೀರಿನಲ್ಲಿ ಬೇಯಿಸಿ. ಸೊಪ್ಪು ತರಕಾರಿಯನ್ನು ಅಕ್ಕಿ ಮತ್ತು ಬೇಳೆ ಮುಕ್ಕಾಲು ಬೆಂದ ನಂತರ ಸೇರಿಸಬಹುದು. ಜೀರಿಗೆಯನ್ನು ಕೊಬ್ಬಿನಲ್ಲಿ ಹುರಿದುಕೊಂಡು ಕೊನೆಗೆ ಸೇರಿಸಿ.
ಮಾಲ್ಟೆಡ್ ರಾಗಿ ಗಂಜಿ
ಸಾಮಗ್ರಿಗಳು: ಮಾಲ್ಟೆಡ್ ರಾಗಿ (30 ಗ್ರಾಂ), ಹುರಿದ ನೆಲಗಡಲೆ (15 ಗ್ರಾಂ), ಬೆಲ್ಲ (20 ಗ್ರಾಂ).
ವಿಧಾನ: ಮಾಲ್ಟೆಡ್ ರಾಗಿ, ಹುರಿದ ನೆಲಗಡಲೆ ಮತ್ತು ಬೆಲ್ಲ ಪುಡಿ ಮಾಡಿ. ಬೇಕಾದಷ್ಟು ನೀರು ಸೇರಿಸಿ ಕೆಲ ನಿಮಿಷಗಳ ಕಾಲ ಬೇಯಿಸಿ.