ಹಾರಕವು ವಾರ್ಷಿಕ ಗಡ್ಡೆ ಹುಲ್ಲಾಗಿದ್ದು, ಇದನ್ನು ಸುಮಾರು 3000 ವರ್ಷಗಳ ಹಿಂದೆಯೇ ಭಾರತದಲ್ಲಿ ಬೆಳೆಯಲಾಯಿತು. ಹಾರಕ ಧಾನ್ಯಗಳು ತಿಳಿ ಕೆಂಪು ಬಣ್ಣದಿಂದ ಕಡು ಬೂದು ಬಣ್ಣಕ್ಕೆ ಬದಲಾಗುತ್ತವೆ. ಎಲ್ಲ ಸಿರಿಧಾನ್ಯಗಳಂತೆ ನಾರಿನಂಶವು ಹೇರಳವಾಗಿದೆ.
ತಮಿಳಿನಲ್ಲಿ ವರಗು ಎಂದೂ, ಕನ್ನಡದಲ್ಲಿ ಹಾರಕ ಎಂದೂ, ಹಿಂದಿಯಲ್ಲಿ ಕೋದ್ರಾ ಎಂದೂ, ತೆಲುಗಿನಲ್ಲಿ ಅರಿಕೇಲು ಎಂದೂ ಕರೆಯಲ್ಪಡುವ ಇದು ಪೋಷಕಾಂಶಗಳ ಆಗರವಾಗಿದೆ.
- ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ – ಇದರರ್ಥ ಹಾರಕವು ಗ್ಲೂಕೋಸ್/ಶಕ್ತಿಯನ್ನು ನಿಧಾನವಾಗಿ, ದೀರ್ಘಕಾಲದವರೆಗೆ ಬಿಡುಗಡೆ ಮಾಡುತ್ತದೆ. ಇದರಿಂದಾಗಿ ಸಕ್ಕರೆ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಇದು ಪಾಲಿಶ್ ಮಾಡಿದ ಬಿಳಿ ಅಕ್ಕಿಗೆ ಉತ್ತಮ ಬದಲೀ ಆಯ್ಕೆಯಾಗಿದೆ.
- ಗ್ಲುಟೆನ್ ಮುಕ್ತ – ಗ್ಲುಟೆನ್ ಇನ್ಟಾಲರೆನ್ಸ್ ಅಥವಾ ಉದರ ಸಂಬಂಧೀ ಸಮಸ್ಯೆ ಇರುವವರಿಗೆ ಸಹಕಾರಿ.
- ಜೀರ್ಣಿಸಿಕೊಳ್ಳಲು ಸುಲಭ
- ಪಾಲಿಫಿನಾಲ್ಗಳಂತಹ ಆ್ಯಂಟಿ ಆ್ಯಕ್ಸಿಡೆಂಟುಗಳು ಸಮೃದ್ಧವಾಗಿವೆ
- ನಾರಿನಂಶ ಸಮೃದ್ಧವಾಗಿದೆ.
- ವಿಟಮಿನ್ನುಗಳ ಉತ್ತಮ ಮೂಲ – ವಿಟಮಿನ್ ಬಿ 6, ನಿಯಾಸಿನ್, ಫೋಲಿಕ್ ಆಸಿಡ್ ಮತ್ತು ಮಿನರಲ್ಸ್ಗಳಾದ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಸತು ಇವೆ.
ಮೆನೋಪಾಸ್ ನಂತರ ಮಹಿಳೆಯರಿಗೆ ಕಾಣಿಸುವ ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಮಟ್ಟದಂತಹ ಹೃದಯರಕ್ತನಾಳದ ಸಮಸ್ಯೆಗಳಿದ್ದರೆ ಹಾರಕವನ್ನು ನಿಯಮಿತವಾಗಿ ಸೇವಿಸುವುದು ತುಂಬಾ ಪ್ರಯೋಜನಕಾರಿ.
ನಿಮ್ಮ ನೆಚ್ಚಿನ ಅಡುಗೆಗಳಲ್ಲಿ ಹಾರಕವನ್ನು ಬಳಸಿ
ನಿಮ್ಮ ಇಷ್ಟದ ಆಹಾರಗಳನ್ನು ತ್ಯಜಿಸುವ ಅಗತ್ಯವಿಲ್ಲ. ಒಂದು ಅಥವಾ ಎರಡು ಪದಾರ್ಥಗಳನ್ನು ಸಿರಿಧಾನ್ಯಗಳೊಂದಿಗೆ ಬದಲಾಯಿಸಿ ಮತ್ತು ನೀವು ರುಚಿಕರವಾದ, ಸಮತೋಲಿತ ಮತ್ತು ಪೌಷ್ಟಿಕವಾದ ಆಹಾರ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳುತ್ತೀರಿ. ನೀವು ಮಾಡಬಹುದಾದ ಕೆಲವು ವಿಷಯಗಳು ಇಲ್ಲಿವೆ:
ನಿಮಗೆ ಉತ್ತಮಾವದದ್ದು ಭೂಮಿಗೂ ಉತ್ತಮ
ಕುತೂಹಲಕರವಾದ ಮತ್ತೊಂದು ಸಂಗತಿಯೆಂದರೆ, ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಂಡು ಮತ್ತು ಕೀಟ/ರೋಗ ಬಾಧೆಗಳಿಂದ ತಪ್ಪಿಸಿಕೊಂಡು ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಜೊತೆಗೆ ಕೃಷಿ ಜೀವಜಾಲದ ಸಮತೋಲನವನ್ನು ಕಾಯ್ದುಕೊಳ್ಳಲು ಹಲವು ರೈತರು ಮಿಶ್ರ ಬೆಳೆ ಪದ್ದತಿಯಾದ ʼಅಕ್ಕಡಿʼ ಪದ್ದತಿಯಲ್ಲಿ ಕೃಷಿ ಮಾಡುತ್ತಾರೆ.
ಸಿರಿಧಾನ್ಯಗಳು ಪರಿಸರ ಸ್ನೇಹಿ. ಅವುಗಳನ್ನು ಸೇವಿಸುವ ಮೂಲಕ, ಶುಷ್ಕ ಮತ್ತು ಅರೆ ಶುಷ್ಕ ಪ್ರದೇಶಗಳಲ್ಲಿನ ರೈತರಿಗೆ ಆ ಪ್ರದೇಶಗಳಿಗೆ ಸೂಕ್ತವಾದ ಬೆಳೆಗಳನ್ನು ಬೆಳೆಯುವಂತೆ ನಾವು ಪ್ರೋತ್ಸಾಹಿಸಿಂದಾಗುತ್ತದೆ – ಇದು ಸುಸ್ಥಿರ ಕೃಷಿ ಮತ್ತು ಜೀವವೈವಿಧ್ಯತೆಯ ಕಡೆಗೆ ಮತ್ತೊಂದು ಹೆಜ್ಜೆ.
ಹಾರಕ ಪಾಕವಿಧಾನಗಳಿಗಾಗಿ ನಮ್ಮ ರೆಸಿಪಿ ವಿಭಾಗವನ್ನೂ ನೋಡಿ.
https://pristineorganics.com/project/kodo-millet-dosa/