ಆರೋಗ್ಯಕರ ಆಹಾರ ಸೇವನೆಯ ಅಭ್ಯಾಸ ಕೆಲವೊಮ್ಮೆ ಗೊಂದಲ ಉಂಟುಮಾಡುತ್ತವೆ. ನಾವು, ಪೌಷ್ಟಿಕ ಆಹಾರ ಕ್ಷೇತ್ರದಲ್ಲಿ ಇಪ್ಪತ್ತೈದು ವರ್ಷಗಳ ಅನುಭವದೊಂದಿಗೆ ಪರಿಣಿತ ಪೌಷ್ಠಿಕತಜ್ಙರು , ಶ್ರೇಷ್ಠವಾದ ಆರೋಗ್ಯಕರ ದವಸ-ಧಾನ್ಯ ಮತ್ತು ಅನುಕೂಲಕರ ಆಹಾರದೊಂದಿಗೆ ನಿಮಗೆ ಸಹಾಯ ಮಾಡುತ್ತೇವೆ.
ನಾವು ಪ್ರಿಸ್ಟೀನ್ ಆರ್ಗ್ಯಾನಿಕ್ಸ್ ನಲ್ಲಿ ಜವಾಬ್ದಾರಿಯುತ, ಪ್ರಜ್ಞಾವಂತ ಆಹಾರದ ಆಯ್ಕೆ ಮತ್ತು ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಲ್ಲ ಸಾವಯವ ಆಹಾರ ಉತ್ಪನ್ನಗಳಲ್ಲಿ ನಂಬಿಕೆ ಇರಿಸಿದ್ದೇವೆ.
ಬಿಗಿನಿಂಗ್ಸ್ ಮಿಕ್ಸ್ಡ್ ಮಿಲೆಟ್ ಅಪರೂಪದ ಮತ್ತು ವಿಶೇಷ ಮಿಶ್ರ ಸಿರಿಧಾನ್ಯಗಳಿಂದ ತಯಾರಿಸಲ್ಪಟ್ಟಿದೆ. ಈ ಸಿರಿಧಾನ್ಯಗಳು ಸಾವಯವ ಪದ್ಧತಿಯಲ್ಲಿ ಬೆಳೆದು ಸಂಸ್ಕರಣೆಗೊಂಡಿದ್ದು, ಕ್ರಿಮಿನಾಶಕ, ರಾಸಾಯನಿಕಗಳಿಂದ ಮುಕ್ತವಾಗಿದೆ. ಧಾನ್ಯಗಳ ಸ್ವಾಭಾವಿಕ ಘಮಲಿನೊಂದಿಗೆ, ಅಪರೂಪದ ಸಿರಿಧಾನ್ಯಗಳ ಮತ್ತು ಸಾವಯವ ಕೃಷಿಯ ಪ್ರಯೋಜನಗಳನ್ನು ಒಟ್ಟಾಗಿ ಅನುಭವಿಸಿ!
ಬಿಸಿ ಅಥವಾ ತಣ್ಣಗಿನ ಹಾಲಿನೊಂದಿಗೆ, ಸೋಯಾ ಹಾಲು ಅಥವಾ ಹಣ್ಣಿನ ರಸದೊಂದಿಗೆ ಸೇವಿಸಿ. ಕತ್ತರಿಸಿದ ಹಣ್ಣು ಮತ್ತು ಬೀಜಗಳನ್ನು ಸೇರಿಸಬಹುದು.
5ಕೆಜಿ, 10 ಕೆಜಿ ಅಥವಾ ನಿಮ್ಮ ಅನುಕೂಲಕರ ಪ್ಯಾಕ್ನಲ್ಲಿ ಲಭ್ಯ
ಬಿಗಿನಿಂಗ್ಸ್ – ಸಾವಯವ ಸೀರಿಯಲ್ ಫ್ಲೇಕ್ಸ್
ಬಿಗಿನಿಂಗ್ಸ್ ಸಾವಯವ ಸೀರಿಯಲ್ ಫ್ಲೇಕ್ಸ್ ಸಾವಯವ ಪದ್ಧತಿಯಲ್ಲಿ ಬೆಳೆದು ಸಂಸ್ಕರಿಸಲ್ಪಟ್ಟ ಜೋಳದಿಂದ ತಯಾರಾಗಿದ್ದು, ಕ್ರಿಮಿನಾಶಕ, ರಾಸಾಯನಿಕಗಳಿಂದ ಮುಕ್ತವಾಗಿದೆ. ಜೋಳದ ಸ್ವಾಭಾವಿಕ ಘಮಲಿನೊಂದಿಗೆ ಸವಿಯಿರಿ.