ಪ್ರಿಸ್ಟೀನ್ ಜೀ಼ಲೋಸ್ – ಸ್ಟೇಜ್ 2, 6 ರಿಂದ 12 ತಿಂಗಳವರೆಗಿನ ಮಕ್ಕಳಿಗೆ ಎದೆಹಾಲು ಕುಡಿಸದಿದ್ದಾಗ ಕೊಡಬಹುದಾದ ಸ್ಪ್ರೇಡ್ರೈಡ್ ಶಿಶು ಫಾರ್ಮುಲಾ.
ಸಾಮಗ್ರಿಗಳು/ಸಂಯೋಜನೆ
Milk solids, Corn oil, Soyabean Oil, High Oleic Sunflower oil, Docosahexaenoic acid (DHA), Minerals (Calcium phosphate tribasic, Sodium chloride, Potassium phosphate dibasic, Magnesium oxide, Ferric pyrophosphate, Zinc sulphate, Cupric sulphate, Manganese sulphate, Potassium iodide, Sodium selenite), Vitamins (Ascorbic acid, d-alpha tocopheryl acetate, Nicotinamide, Choline bitartrate, Calcium pantothenate, Thiamine chloride hydrochloride, Pyridoxine hydrochloride, Riboflavin, Retinyl acetate, Folic acid, Phytylmenaquinone, d-Biotin, Ergocalciferol, Cyanocobalamin), Taurine, L- Carnitine
ಉಪಯೋಗಿಸುವ ರೀತಿ
ತಯಾರಿಸುವ ವಿಧಾನ:
• ಕೈಗಳನ್ನು ಚೆನ್ನಾಗಿ ತೊಳೆಯಿರಿ
• ಆಹಾರ ತಯಾರಿಸುವ ಬೌಲ್ ಮತ್ತು ಚಮಚಗಳನ್ನು ಕ್ರಿಮಿಮುಕ್ತಗೊಳಿಸಿ
• ಕುಡಿಯುವ ನೀರನ್ನು ಐದು ನಿಮಿಷಗಳ ಕಾಲ ಕುದಿಸಿ ತಣಿಸಿರಿ
• ಫೀಡಿಂಗ್ ಟೇಬಲ್ಲಿನಲ್ಲಿ ಸೂಚಿಸಿದಷ್ಟು ನೀರನ್ನು ಪಾತ್ರೆಗೆ ಹಾಕಿರಿ
• ಫೀಡಿಂಗ್ ಟೇಬಲ್ ಪ್ರಕಾರ ನಿಮ್ಮ ಮಗುವಿನ ಪ್ರಾಯಕ್ಕೆ ತಕ್ಕಷ್ಟು ಸ್ಕೂಪ್ ಝೆಲೋಸ್ ಹಾಕಿರಿ. ಕೊಟ್ಟಿರುವ ಸ್ಕೂಪ್ ಮಾತ್ರ ಬಳಸಿರಿ. ಚೆನ್ನಾಗಿ ಕಲಸಿರಿ.
• ಬೌಲ್ ಮತ್ತು ಚಮಚದ ಸಹಾಯದಿಂದ ಮಗುವಿಗೆ ತಿನ್ನಿಸಿರಿ. ಬಾಕಿ ಉಳಿದ ಆಹಾರವನ್ನು ಎಸೆಯಿರಿ.
ಅಲರ್ಜಿ ಉಪದೇಶ
ಹಾಲು ಮತ್ತು ಸೋಯಾ
ಶೆಲ್ಫ್ ಕಾಲಾವಧಿ
ತಯಾರಿಸಿದ ದಿನಾಂಕದಿಂದ 12 ತಿಂಗಳು
ಎಚ್ಚರಿಕೆ
ಒಮ್ಮೆ ಆಹಾರ ತಯಾರಿಸುವಾಗ ಒಂದು ಬಾರಿಗೆ ಬೇಕಾದಷ್ಟು ಮಾತ್ರ ತಯಾರಿಸಿಕೊಳ್ಳಿ. ತಯಾರಿಸಿದ ತಕ್ಷಣವೇ ಉಣಿಸಿರಿ ಮತ್ತು ಸೂಚನೆಗಳನ್ನು ಸರಿಯಾಗಿ ಪಾಲಿಸಿರಿ. ಬಾಕಿ ಉಳಿದ ಆಹಾರವನ್ನು ಎಸೆಯಿರಿ. ಉಣಿಸುವಾಗ ಮಗುವನ್ನು ಯಾವಾಗಲೂ ಹಿಡಿದುಕೊಳ್ಳಿ. ಮಗುವನ್ನು ಸರಿಯಾಗಿ ಗಮನಿಸದಿದ್ದರೆ ಉಸಿರುಗಟ್ಟುವಿಕೆಗೆ ಕಾರಣವಾಗಬಹುದು. ತಾಯಿಹಾಲಿನ ಬದಲಿಯನ್ನು ಆರೋಗ್ಯ ಕಾರ್ಯಕರ್ತರ ಸಲಹೆಯ ಮೇರೆಗೆ ಮತ್ತು ಅದರ ಬಳಕೆಯ ಅಗತ್ಯತೆ, ಬಳಕೆಯ ಸರಿಯಾದ ವಿಧಾನವನ್ನು ಅರಿತು ಮಾತ್ರ ಬಳಸಬೇಕು. ಈ ತಾಯಿಹಾಲಿನ ಬದಲಿ ಮಗುವಿನ ಪೋಷಣೆಗೆ ಇರುವ ಏಕೈಕ ದಾರಿಯಲ್ಲ.
“ಎಚ್ಚರಿಕೆ/ಸೂಚನೆ – ತಾಯಿಹಾಲಿನ ಬದಲಿಯನ್ನು ಎಚ್ಚರಿಕೆಯಿಂದ ಮತ್ತು ಆರೋಗ್ಯಕರವಾಗಿ ತಯಾರಿಸುವುದು ಅತ್ಯಂತ ಅವಶ್ಯಕವಾಗಿದೆ. ನಿರ್ದೇಶಿಸಿದ ಅಳತೆಗಿಂತ ಕಡಿಮೆ ಬಳಸಿದರೆ ಮಗುವಿಗೆ ಬೇಕಾದ ಪೋಷಕಾಂಶಗಳಲ್ಲಿ ಕೊರತೆಯಾಗಬಹುದು. ನಿರ್ದೇಶಿಸಿದ ಅಳತೆಗಿಂತ ಹೆಚ್ಚು ಬಳಸಿದರೆ ನೀರಿನಂಶದಲ್ಲಿ ಕೊರತೆಯಾಗಬಹುದು. ಆದ್ದರಿಂದ ಸೂಚಿಸಿದ ಅಳತೆಯನ್ನೇ ಬಳಸಿರಿ.”
ಒದಗಿಸಿರುವ ಸ್ಕೂಪನ್ನು ಚೆನ್ನಾಗಿ ತೊಳೆದು ಒಣಗಿಸಿದ ನಂತರ ಉಪಯೋಗಿಸಿ. ತೆರೆದ ನಂತರ ಮೂರು ತಿಂಗಳ ಒಳಗೆ ಅಥವಾ ಕಾಲಾವಧಿ ಮುಗಿಯುವ ಮುನ್ನ ಉಪಯೋಗಿಸಿರಿ.
ಪ್ರಾಯ:
6- 12 ತಿಂಗಳುಗಳು
Reviews
მიმოხილვები ჯერ არ არის.