Nutrient Per 100g
Energy 400 kcal
Protein 15.5 g
Carbohydrates 72.0 g
Sugar 20.0 g
Fat 5.5 g
Vitamin A 350 mcg
Thiamine (B1) 0.5 mcg
Riboflavin (B2) 0.6 mg
Niacin (B3) 5.0 mg
Pyridoxine (B6) 0.8 mg
Folic acid 50 mcg
Vitamin C 30.0 mg
Vitamin D 5.0 mg
Vitamin E 10.5 mg
Vitamin K 8.0 mg
Vitamin B12 0.5 mcg
Pantothenic acid 1.5 mg
Calcium 300 mg
Magnesium 100 mg
Phosphorous 280 mg
Potassium 140 mg
Sodium 5.0 mg
Iron 5.0 mg
Zinc 4.5 mg

ಪೌಷ್ಟಿಕ್ ಅನ್ನು ನೈಸರ್ಗಿಕವಾಗಿ ಸಮೃದ್ಧವಾಗಿರುವ ಕಡಿಮೆ ಸಂಸ್ಕರಿಸಿದ ಸಿರಿಧಾನ್ಯಗಳಿಂದ ತಯಾರಿಸಲಾಗಿದೆ. ಕಿಣ್ವಗಳ ಜೊತೆಗೆ ಬೇಳೆಕಾಳುಗಳನ್ನು ಸೇರಿಸಲಾಗುವುದರಿಂದ ಮಗುವಿಗೆ ಹಿತವೆನಿಸುವ ಆಹಾರವಾಗಿದೆ. ಇದು 6 ರಿಂದ 24 ತಿಂಗಳ ಮಕ್ಕಳಿಗೆ ಧಾನ್ಯ ಆಧಾರಿತ ಶಿಶು ಆಹಾರ.

ಪೌಷ್ಟಿಕ್, ಸಾವಯವವಾಗಿ ಬೆಳೆದ ಧಾನ್ಯಗಳಿಂದ ತಯಾರಿಸಲಾದ ಸಂಪೂರ್ಣ ಆಹಾರವಾಗಿದ್ದು, ಒಮೆಗಾ 3 ಫ್ಯಾಟಿ ಆಸಿಡ್‌ಗಳಿಂದ ತುಂಬಿದೆ ಮತ್ತು ಮಕ್ಕಳ ಬೆಳವಣಿಗೆಗೆ ಅವಶ್ಯಕವಾದ ಅಗತ್ಯ ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿದೆ. ಇದರ ನೈಸರ್ಗಿಕ ಸ್ವಾದವು ಅಹ್ಲಾದಕರವಾಗಿದ್ದು ಹಸಿವನ್ನು ಹೆಚ್ಚಿಸುತ್ತದೆ. ಉತ್ತಮ ಗುಣಮಟ್ಟದ ಧಾನ್ಯಗಳು, ದ್ವಿದಳ ಧಾನ್ಯಗಳು, ಸಕ್ಕರೆ ಮತ್ತು ವಿಟಮಿನ್ ಹಾಗೂ ಮಿನರಲ್ ಗಳನ್ನು ಒಳಗೊಂಡ ಪೌಷ್ಟಿಕ್ ಅನ್ನು ಅತ್ಯಂತ ಸ್ವಚ್ಛ ಪರಿಸರದಲ್ಲಿ ತಯಾರಿಸಲಾಗಿದೆ. ಪೌಷ್ಟಿಕ್ ಮೃದುವಾದ ಅರೆಘನ ಪದಾರ್ಥವನ್ನಾಗಿ ರೂಪಿಸುವ ಕಿಣ್ವಗಳನ್ನು ಹೊಂದಿದ್ದು ಮಕ್ಕಳಿಗೆ ತಿನ್ನಿಸಲು ಅನುಕೂಲವಾಗುತ್ತದೆ ಮತ್ತು ನುಂಗುವುದಕ್ಕೂ ಹಾಗು ಜೀರ್ಣವಾಗುವುದಕ್ಕೂ ಸುಲಭ.

ಸಾಮಗ್ರಿಗಳು:

ಸಾವಯವ ಗೋಧಿ ಹಿಟ್ಟು, ಸಾವಯವ ಅಕ್ಕಿ ಹಿಟ್ಟು, ಸಾವಯವ ರಾಗಿ ಹಿಟ್ಟು, ಸಾವಯವ ಸಾಮೆ ಹಿಟ್ಟು, ಕೊಬ್ಬು ರಹಿತ ಸೋಯಾ ಹಿಟ್ಟು, ಸಾವಯವ ಸಕ್ಕರೆ, ಸಾವಯವ ಹೆಸರು ಬೇಳೆ ಹಿಟ್ಟು, ಮಿನರಲ್ಸ್‌, ವಿಟಮಿನ್‌ಗಳು ಮತ್ತು ಆಲ್ಫಾ ಅಮೈಲೇಸ್.

ಬಳಕೆಯ ವಿಧಾನ:

  • ಕೈಗಳು ಮತ್ತು ಪಾತ್ರೆಗಳನ್ನು ಚೆನ್ನಾಗಿ ತೊಳೆದುಕೊಳ್ಳಿ.
  • ಬೌಲ್ ಮತ್ತು ಚಮಚವನ್ನು 5 ನಿಮಿಷಗಳ ಕಾಲ ಕುದಿಯುವ ನೀರಿನಲ್ಲಿ ಹಾಕುವ ಮೂಲಕ ಕ್ರಿಮಿಮುಕ್ತಗೊಳಿಸಿ.
  • ಕುಡಿಯುವ ನೀರನ್ನು 5 ನಿಮಿಷಗಳಷ್ಟು ಕುದಿಸಿ ತಣಿಸಿ.
  • ನಿರಂತರವಾಗಿ ಕೈಯಾಡಿಸುತ್ತಾ ಸೂಚಿಸಲಾದ ಪ್ರಮಾಣದಷ್ಟು ನೀರನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ ನಯವಾದ ಮಿಶ್ರಣ ತಯಾರಿಸಿ
  • ತಯಾರಿಸಿದ ಆಹಾರವನ್ನು ಅರ್ಧ ಗಂಟೆಯೊಳಗೆ ಬಳಸಿ, ಇಲ್ಲದಿದ್ದರೆ ಕೆಡಬಹುದು.
  • ಬಾಕಿ ಉಳಿದ ಆಹಾರವನ್ನು ಬಳಸದಿರಿ

ಪ್ರಮುಖ ಸೂಚನೆ

“ತಾಯಿ ಹಾಲು ಮಗುವಿಗೆ ಉತ್ತಮ”

ಶೆಲ್ಫ್ ಲೈಫ್:

ತಯಾರಿಸಿದ ದಿನಾಂಕದಿಂದ 12 ತಿಂಗಳುಗಳ ಕಾಲ

ಅಲರ್ಜಿ ಸೂಚನೆ:

ಗೋಧಿ ಮತ್ತು ಸೋಯಾ

Reviews

მიმოხილვები ჯერ არ არის.

Only logged in customers who have purchased this product may leave a review.