ರೆಡಿ ಟು ಈಟ್ ತಿನಿಸುಗಳಿಗೆ ಒಂದು ಆರೋಗ್ಯಕರ ಟ್ವಿಸ್ಟ್

ಅವನ್ಆರ್ಗ್ ದಾಲ್ ಚಾವಲ್ ಸಾವಯವ ಪದಾರ್ಥಗಳಿಂದ ತಯಾರಿಸಲಾಗಿದೆ — ಪಾಲಿಶ್ ಮಾಡದ ಬಾಸ್ಮತಿ ಅಕ್ಕಿ ಮತ್ತು ತೊಗರಿ ಬೇಳೆಯನ್ನು ತಾಜಾ ಹುರಿದು ಪುಡಿ ಮಾಡಿದ ಸಾಂಪ್ರದಾಯಿಕ ಮಸಾಲೆಗಳೊಂದಿಗೆ ಸೇರಿಸಿ ಬೇಯಿಸಲಾಗಿದೆ. ಒಂದು ಸಾಧಾರಣ ಊಟವಾಗಬಲ್ಲ ಇದು ದೇಸೀ ತುಪ್ಪದ ರುಚಿ ಮತ್ತು ಘಮದಿಂದಾಗಿ ಸ್ವಾದಿಷ್ಟ ಊಟವಾಗುತ್ತದೆ.

ನಮ್ಮ ರೆಡಿ ಟು ಈಟ್ ತಿನಿಸುಗಳನ್ನು ನಾರಿನಂಶ ಅಧಿಕವಿರುವ ಹಾಗೂ ಕಡಿಮೆ ಸಂಸ್ಕರಣೆ ಮಾಡಿದ ಧಾನ್ಯಗಳಿಂದ ತಯಾರಿಸಲಾಗಿದೆ. 100% ಸಸ್ಯಾಹಾರ. ಇವುಗಳನ್ನು ಸಾಧ್ಯವಾದಷ್ಟೂ ಪ್ರಾದೇಶಿಕ ಸಾವಯವ ಬೆಳೆಗಾರರಿಂದ ಸಂಗ್ರಹಿಸಲಾಗುತ್ತದೆ. ಹೊಸ ಪರಿಣಾಮಕಾರಿ ತಂತ್ರಜ್ಞಾನ ರೆಡಿ ಟು ಈಟ್ ತಿನಿಸುಗಳನ್ನು ಮನೆಯಲ್ಲೇ ತಯಾರಿಸಿದ ತಾಜಾತನದೊಂದಿಗೆ ಊಟದ ತಟ್ಟೆಗೆ ತಲುಪಿಸುತ್ತದೆ. ಪ್ರಿಸ್ಡೀನ್‌ನ ಪ್ರತಿಯೊಂದು ರೆಡಿ ಟು ಈಟ್ ತಿನಿಸು ಕೂಡ ಶುದ್ಧ ದೇಸೀ ತುಪ್ಪದಿಂದ ತಯಾರಿಸಲಾಗಿದೆ. ರುಚಿ ಹೆಚ್ಚಿಸಲು ಹುರಿದ ತಾಜಾ ಹುಡಿ ಮಾಡಿದ ಮಸಾಲೆಗಳನ್ನು ಸೇರಿಸಲಾಗಿದೆ. ಒಂದು ಸಾಧಾರಣ ಊಟಕ್ಕಿಂತ ಇವು ಹೆಚ್ಚು ಪೋಷಕಾಂಶಯುಕ್ತವಾಗಿದೆ ಮತ್ತು ನಿಮ್ಮ ಪ್ರತಿ ದಿನವನ್ನೂ ವಿಶೇಷವಾಗಿಸುತ್ತದೆ.

 Nutrition Information Per 100g
Energy 341 kcal
Protein 13 g
Carbohydrates 56 g
Sugar 0.0 g
Dietary Fibre 3 g
Fat 11 g

ಸಾಮಗ್ರಿಗಳು:

ಸಾವಯವ ಬಾಸ್ಮತಿ ಅಕ್ಕಿ, ಸಾವಯವ ತೊಗರಿ ಬೇಳೆ, ಸಾವಯವ ತುಪ್ಪ, ಸಾವಯವ ಗೋಡಂಬಿ, ಸಾವಯವ ಬ್ಯಾಡಗಿ ಮೆಣಸು, ಸಾವಯವ ಕೊತ್ತಂಬರಿ, ಒಣಗಿಸಿದ ಈರುಳ್ಳಿ, ಸಾವಯವ ಜೀರಾ, ಒಣ ಶುಂಠಿ ಪುಡಿ, ಒಣಗಿಸಿದ ಮಾವಿನ ಪುಡಿ, ಒಣಗಿಸಿದ ಟೊಮೆಟೊ ಪುಡಿ, ಬೆಳ್ಳುಳ್ಳಿ ಪುಡಿ, ಸಾವಯವ ಸಾಸಿವೆ, ನಿಂಬೆ ಪುಡಿ, ಸಾವಯವ ಜೀರಾ, ಸಾವಯವ ಅರಿಶಿನ ಪುಡಿ, ಸಾವಯವ ಅರಿಶಿನ, ಒಣಗಿಸಿದ ಕೊತ್ತಂಬರಿ ಸೊಪ್ಪು, ಸಾವಯವ ಸೋಂಪು, ಹಿಂಗು

ಉಪಯೋಗಿಸುವ ರೀತಿ

ಡಬ್ಬದ ಮುಚ್ಚಳ ತೆರೆಯಿರಿ. ಪೊಟ್ಟಣದಲ್ಲಿರುವುದನ್ನು‌ ಅದರದೇ ಡಬ್ಬಕ್ಕೆ ಸುರಿಯಿರಿ. ಅದಕ್ಕೆ ಕಪ್ಪು ಮಾರ್ಕಿನ ತನಕ ಕುದಿಯುವ ನೀರನ್ನು ಹಾಕಿ , ಚನ್ನಾಗಿ ಕಲಸಿ. ಮುಚ್ಚಳ ಮುಚ್ಚಿ 8 ನಿಮಿಷ ಕಾಯಿರಿ. ಈಗ ನಿಮ್ಮ ಊಟವನ್ನು ಸವಿಯಿರಿ.

ಶೆಲ್ಫ್ ಕಾಲಾವಧಿ

ತಯಾರಿಸಿದ ದಿನಾಂಕದಿಂದ 6 ತಿಂಗಳು

ಅಲರ್ಜಿ ಸಂಬಂಧೀ ಸೂಚನೆ

ನಟ್ಸ್

Reviews

მიმოხილვები ჯერ არ არის.

Only logged in customers who have purchased this product may leave a review.