ರೆಡಿ ಟು ಈಟ್ ತಿನಿಸುಗಳಿಗೆ ಒಂದು ಆರೋಗ್ಯಕರ ಟ್ವಿಸ್ಟ್

ಅವನ್ ಆರ್ಗ್ ಮಿಲೆಟ್‌ ಬಿಸಿಬೇಳೆ ಬಾತ್ ಕೆಂಪು ಕಾಳುಗಳು ಮತ್ತು 7 ವಿವಿಧ ಸಿರಿಧಾನ್ಯಗಳನ್ನೂ ಸೇರಿಸಿ ತಯಾರಿಸಲಾಗಿದೆ. ಅವುಗಳಲ್ಲಿ ಸಾಮಾನ್ಯ ಸಿರಿಧಾನ್ಯಗಳಾದ ರಾಗಿ, ಜೋಳ, ಸಜ್ಜೆ ಮತ್ತು ಅಪೂರ್ವ ಸಿರಿಧಾನ್ಯಗಳಾದ ಹಾರಕ, ಬರಗು ಕೂಡ ಸೇರಿವೆ. ಎಲ್ಲವೂ ಸಾವಯವ ಪ್ರಮಾಣಿತ, ನಾರಿನಂಶ ಅಧಿಕ ಮತ್ತು ರುಚಿಕರ. ಈ ಸಿರಿಧಾನ್ಯಗಳನ್ನು ತರಕಾರಿ ಮತ್ತು ತಾಜಾ ಹುಡಿ ಮಾಡಿದ ಮಸಾಲೆಗಳೊಂದಿಗೆ ತಯಾರಿಸಲಾಗಿದೆ. ಅಲಂಕಾರಕ್ಕೆ ಹುರಿದ ಗೋಡಂಬಿಗಳನ್ನು ಬಳಸಲಾಗಿದೆ.

ನಮ್ಮ ರೆಡಿ ಟು ಈಟ್ ತಿನಿಸುಗಳನ್ನು ನಾರಿನಂಶ ಅಧಿಕವಿರುವ ಹಾಗೂ ಕಡಿಮೆ ಸಂಸ್ಕರಣೆ ಮಾಡಿದ ಧಾನ್ಯಗಳಿಂದ ತಯಾರಿಸಲಾಗಿದೆ.  ಇದು 100% ಸಸ್ಯಾಹಾರ. ಇವುಗಳನ್ನು ಸಾಧ್ಯವಾದಷ್ಟೂ ಪ್ರಾದೇಶಿಕ ಸಾವಯವ ಬೆಳೆಗಾರರಿಂದ ಸಂಗ್ರಹಿಸಲಾಗಿದೆ.  ಶುದ್ಧ ಮತ್ತು ರಾಸಾಯನಿಕ ಅಡಿಟಿವ್ ಮತ್ತು ಪ್ರಿಸರ್ವೇಟಿವ್ ಗಳಿಂದ ಮುಕ್ತ. ಹೊಸ ಪರಿಣಾಮಕಾರಿ ತಂತ್ರಜ್ಞಾನವು ನಮ್ಮ ರೆಡಿ ಟು ಈಟ್ ತಿನಿಸುಗಳನ್ನು ಮನೆಯಲ್ಲೇ ತಯಾರಿಸಿದ ತಾಜಾತನದೊಂದಿಗೆ ನಿಮ್ಮ ಊಟದ ತಟ್ಟೆಗೆ ತಲುಪಿಸುತ್ತದೆ. ನಮ್ಮ ಪ್ರತಿಯೊಂದು ರೆಡಿ ಟು ಈಟ್ ತಿನಿಸು ಕೂಡ ಶುದ್ಧ ದೇಸೀ ತುಪ್ಪದಿಂದ ತಯಾರಿಸಲಾಗಿದೆ. ರುಚಿ ಹೆಚ್ಚಿಸಲು ಹುರಿದ ತಾಜಾ ಹುಡಿ ಮಾಡಿದ ಮಸಾಲೆಗಳನ್ನು ಸೇರಿಸಲಾಗಿದೆ.  ಒಂದು ಸಾಮಾನ್ಯ ಊಟಕ್ಕಿಂತ ಇವು ಪೋಷಕಾಂಶಯುಕ್ತವಾಗಿದೆ ಮತ್ತು ನಿಮ್ಮ ಪ್ರತಿ ದಿನವನ್ನೂ ವಿಶೇಷವಾಗಿಸುತ್ತದೆ.

Per 100g
Energy 331 kcal
Protein 8 g
Carbohydrates 48 g
Sugar 0.0 g
Dietary Fibre 13 g
Fat 11 g

ಸಾಮಗ್ರಿಗಳು:

ಸಾವಯವ ಜೋಳ, ಸಾವಯವ ತೊಗರಿ ಬೇಳೆ, ಸಾವಯವ ಸಾಮೆ, ಸಾವಯವ ತುಪ್ಪ, ಸಾವಯವ ಸಜ್ಜೆ, ಸಾವಯವ ಗೋಡಂಬಿ, ಸಾವಯವ ರಾಗಿ, ಸಾವಯವ ಹಾರಕ, ಸಾವಯವ ನವಣೆ, ಸಾವಯವ ಕೊತ್ತಂಬರಿ, ಒಣಗಿಸಿದ ಬೀನ್ಸ್, ಒಣಗಿಸಿದ ಕ್ಯಾರೆಟ್, ಸಾವಯವ ಬರಗು, ಸಾವಯವ ಉದ್ದಿನ ಬೇಳೆ, ಒಣಗಿಸಿದ ಹಸಿರು ಮೆಣಸು, ಸಾವಯವ ಕೆಂಪು ಮೆಣಸು, ಸಾವಯವ ಜೀರಿಗೆ, ಸಾವಯವ ಲವಂಗ ಚಕ್ಕೆ, ಸಾವಯವ ಜೀರಿಗೆ, ಸಾವಯವ ಸಾಸಿವೆ, ಸಾವಯವ ಅರಿಶಿನ ಪುಡಿ, ಸಾವಯವ ಮೆಂತ್ಯ, ಸಾವಯವ ಲವಂಗ, ಹಿಂಗು, ಮರಾಠಿ ಮೊಗ್ಗು, ನಿಂಬೆ ಪುಡಿ

ಉಪಯೋಗಿಸುವ ರೀತಿ

ಡಬ್ಬದ ಮುಚ್ಚಳ ತೆರೆಯಿರಿ. ಪೊಟ್ಟಣದಲ್ಲಿರುವುದನ್ನು ಡಬ್ಬಕ್ಕೆ ಸುರಿಯಿರಿ. ಅದಕ್ಕೆ ಕಪ್ಪು ಮಾರ್ಕಿನ ತನಕ ಕುದಿಯುವ ನೀರನ್ನು ಹಾಕಿರಿ. ಚೆನ್ನಾಗಿ ಕಲಸಿ. ಮುಚ್ಚಳ ಮುಚ್ಚಿ 8 ನಿಮಿಷ ಕಾಯಿರಿ. ಈಗ ನಿಮ್ಮ ಊಟವನ್ನು ಸವಿಯಿರಿ.

ಶೆಲ್ಫ್ ಕಾಲಾವಧಿ

ತಯಾರಿಸಿದ ದಿನಾಂಕದಿಂದ 6 ತಿಂಗಳು

ಅಲರ್ಜಿ ಸೂಚನೆ

ನಟ್ಸ್

Reviews

მიმოხილვები ჯერ არ არის.

Only logged in customers who have purchased this product may leave a review.