ರೆಡಿ ಟು ಈಟ್ ತಿನಿಸುಗಳಿಗೆ ಒಂದು ಆರೋಗ್ಯಕರ ಟ್ವಿಸ್ಟ್

ಅವನ್ ಆರ್ಗ್ ಮಿಲೆಟ್ ಖಿಚಡಿ ಹೆಸರುಬೇಳೆ ಮತ್ತು 7 ವಿವಿಧ ಸಿರಿಧಾನ್ಯಗಳನ್ನು ಸೇರಿಸಿ ತಯಾರಿಸಲಾಗಿದೆ. ಅವುಗಳಲ್ಲಿ ಸಾಮಾನ್ಯ ಸಿರಿಧಾನ್ಯಗಳಾದ ರಾಗಿ, ಜೋಳ, ಸಜ್ಜೆ ಮತ್ತು ಅಪರೂಪದ ಸಿರಿಧಾನ್ಯಗಳಾದ ಹಾರಕ, ಬರಗು ಕೂಡ ಸೇರಿವೆ. ಎಲ್ಲವೂ ಸಾವಯವ ಪ್ರಮಾಣಿತ, ನಾರಿನಂಶ ಸಮೃದ್ಧ ಮತ್ತು ರುಚಿಕರ.. ಈ ಸಿರಿಧಾನ್ಯಗಳನ್ನು ತರಕಾರಿ ಮತ್ತು ತಾಜಾ ಹುಡಿ ಮಾಡಿದ ಮಸಾಲೆಗಳೊಂದಿಗೆ ತಯಾರಿಸಲಾಗಿದೆ. ಮತ್ತಷ್ಟು ಚಂದಗಾಣಿಸಲು ಹುರಿದ ಗೋಡಂಬಿಗಳನ್ನು ಸೇರಿಸಲಾಗಿದೆ.

ನಮ್ಮ ರೆಡಿ ಟು ಈಟ್ ತಿನಿಸುಗಳನ್ನು ನಾರಿನಂಶ ಅಧಿಕವಿರುವ ಹಾಗೂ ಕಡಿಮೆ ಸಂಸ್ಕರಣೆ ಮಾಡಿದ ಧಾನ್ಯಗಳಿಂದ ತಯಾರಿಸಲಾಗಿದೆ. 100% ಸಸ್ಯಾಹಾರ. ಸಾಧ್ಯವಾದಷ್ಟೂ ಪ್ರಾದೇಶಿಕ ಸಾವಯವ ಬೆಳೆಗಾರರಿಂದ ಸಂಗ್ರಹಿಸಲಾಗಿದೆ. ಹೊಸ ಪರಿಣಾಮಕಾರಿ ತಂತ್ರಜ್ಞಾನ ರೆಡಿ ಟು ಈಟ್ ತಿನಿಸುಗಳನ್ನು ಮನೆಯಲ್ಲೇ ತಯಾರಿಸಿದ ತಾಜಾತನದೊಂದಿಗೆ ನಿಮ್ಮ ಊಟದ ತಟ್ಟೆಗೆ ತಲುಪಿಸುತ್ತದೆ. ನಮ್ಮ ಪ್ರತಿಯೊಂದು ರೆಡಿ ಟು ಈಟ್ ತಿನಿಸು ಕೂಡ ಶುದ್ಧ ದೇಸೀ ತುಪ್ಪದಿಂದ ತಯಾರಿಸಲಾಗಿದೆ. ರುಚಿ ಹೆಚ್ಚಿಸಲು ಹುರಿದ ತಾಜಾ ಹುಡಿ ಮಾಡಿದ ಮಸಾಲೆಗಳನ್ನು ಸೇರಿಸಲಾಗಿದೆ. ಸಾಧಾರಣ ಊಟಕ್ಕಿಂತ ಇವು ಪೋಷಕಾಂಶಯುಕ್ತವಾಗಿದೆ ಮತ್ತು ನಿಮ್ಮ ಪ್ರತಿ ದಿನವನ್ನೂ ವಿಶೇಷವಾಗಿಸುತ್ತದೆ.

Nutrient Per 100g
Energy 341 kcal
Protein 13 g
Carbohydrates 56 g
Sugar 0.0 g
Dietary Fibre 3 g
Fat 11 g

ಸಾಮಗ್ರಿಗಳು:

ಸಾವಯವ ಜೋಳ, ಸಾವಯವ ಸಾಮೆ ಸಿರಿಧಾನ್ಯ, ಸಾವಯವ ತುಪ್ಪ, ಸಾವಯವ ಸಜ್ಜೆ ಸಿರಿಧಾನ್ಯ, ಸಾವಯವ ಗೋಡಂಬಿ, ಸಾವಯವ ರಾಗಿ, ಸಾವಯವ ಹೆಸರುಬೇಳೇ, ಸಾವಯವ ಹಾರಕ ಸಿರಿಧಾನ್ಯ, ಸಾವಯವ ನವಣೆ ಸಿರಿಧಾನ್ಯ, ಸಾವಯವ ಬರಗು ಸಿರಿಧಾನ್ಯ, ಸಾವಯವ ಜೀರಿಗೆ, ಸಾವಯವ ಮೆಣಸು, ಒಣಗಿಸಿದ ಈರುಳ್ಳಿ, ಒಣಗಿಸಿದ ಶುಂಠಿ, ಸಾವಯವ ಸಾಸಿವೆ, ಸಾವಯವ ಅರಿಶಿನ, ಒಣಗಿಸಿದ ಹಸಿರು ಮೆಣಸು, ನಿಂಬೆ ಪುಡಿ, ಹಿಂಗು, ಕರಿಬೇವಿನ ಎಲೆಗಳು

ಉಪಯೋಗಿಸುವ ರೀತಿ

ಡಬ್ಬದ ಮುಚ್ಚಳ ತೆರೆಯಿರಿ. ಪೊಟ್ಟಣದಲ್ಲಿರುವುದನ್ನು ಅದೇ ಡಬ್ಬಕ್ಕೆ ಸುರಿಯಿರಿ. ಅದಕ್ಕೆ ಕಪ್ಪು ಮಾರ್ಕಿನ ತನಕ ಕುದಿಯುವ ನೀರನ್ನು ಹಾಕಿರಿ. ಚೆನ್ನಾಗಿ ಕಲಸಿ. ಮುಚ್ಚಳ ಮುಚ್ಚಿ 8 ನಿಮಿಷ ಕಾಯಿರಿ. ಈಗ ನಿಮ್ಮ ಊಟವನ್ನು ಸವಿಯಿರಿ.

ಶೆಲ್ಫ್ ಕಾಲಾವಧಿ

ತಯಾರಿಸಿದ ದಿನಾಂಕದಿಂದ 6 ತಿಂಗಳು

ಅಲರ್ಜಿ ಸಂಬಂಧಿ ಸೂಚನೆಗಳು

ನಟ್ಸ್

Reviews

მიმოხილვები ჯერ არ არის.

Only logged in customers who have purchased this product may leave a review.