ಎಣ್ಣೆ ಮತ್ತು ತುಪ್ಪದೊಂದಿಗೆ ನಾದಿದ ಸಿರಿಧಾನ್ಯ ಹಿಟ್ಟಿನಿಂದ ಮಾಡಿದ ಮಿಕ್ಸ್ಡ್ ಮಿಲೆಟ್ ರೋಟಿಸ್ ಅನ್ನು ಮಾಡಿ ನೋಡಿ. ನಿಮ್ಮ ಇಷ್ಟದ ಗೊಜ್ಜಿನೊಂದಿಗೆ ನೆಂಜಿಕೊಂಡು ಸವಿಯಿರಿ.
ತಯಾರಿ ಸಮಯ
30 ನಿಮಿಷ
ಅಡುಗೆ ಸಮಯ
5 ನಿಮಿಷ
ಸರ್ವ್
ಇಬ್ಬರಿಗೆ
ಪದಾರ್ಥಗಳು
ಸಾವಯವ ಸಿರಿಧಾನ್ಯ ಹಿಟ್ಟು – 1 ಕಪ್
ಬೆಚ್ಚಗಿನ ನೀರು – ½ ಕಪ್ (ಹೆಚ್ಚುವರಿ 2 ಟೀಸ್ಪೂನ್)
ಹಿಮಾಲಯನ್ ಪಿಂಕ್ ಸಾಲ್ಟ್ – ¼ ಟೀಸ್ಪೂನ್ (ಅಗತ್ಯವಿದ್ದರೆ)
ಎಣ್ಣೆ / ತುಪ್ಪ: ಬೇಯಿಸಲು
ವಿಧಾನ
ಮೃದುವಾದ ಹಿಟ್ಟನ್ನು ಬೆರೆಸಿ ಅರ್ಧ ಘಂಟೆಯವರೆಗೆ ನೆನೆಯಲು ಬಿಡಿ.
ಲಟ್ಟಿಸಿ ತುಪ್ಪ / ಎಣ್ಣೆಯೊಂದಿಗೆ ಬೇಯಿಸಿ ಬಿಸಿ ತವಾದಲ್ಲಿ ತಯಾರಿಸಿ.
ಬಿಸಿಯಾಗಿ ಬಡಿಸಿ.
ಟಿಪ್ಸ್: ನೆನೆಸಿದ ಸಿರಿಧಾನ್ಯ ಹಿಟ್ಟು ಒಣಗಲು ಶುರುವಾಗುತ್ತದೆ. ಆದ್ದರಿಂದ ಹಿಟ್ಟನ್ನು ಮೃದುವಾಗಿರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಆ ಸಮಯದಲ್ಲಿ ಒಣಗುವುದನ್ನು ತಪ್ಪಿಸಲು ಒದ್ದೆಯಾದ ಕೈಗಳಿಂದ ಅದನ್ನು ಸವರುತ್ತಿರಿ.
Leave a reply